ರಾಷ್ಟ್ರೀಯ

ತಮಿಳುನಾಡಿನಲ್ಲಿ ಈಗ ಬದಲಾವಣೆ ಗಾಳಿ ಬಹುಪಕ್ಷೀಯ ಸ್ಪರ್ಧೆಗೆ ಅಣಿ

Pinterest LinkedIn Tumblr

Vijayakanth_0

ಚೆನ್ನೈ: ತಮಿಳುನಾಡು ರಾಜಕಾರಣದಲ್ಲೀಗ ಬದಲಾವಣೆಯ ಗಾಳಿ ಬೀಸತೊಡಗಿದೆ. ಹೆಚ್ಚು ಕಡಿಮೆ ಮೂರು ದಶಕಗಳಿಂದ ಸರತಿಯಂತೆ ಆಡಳಿತ ಚುಕ್ಕಾಣಿ ಹಿಡಿದಿದ್ದ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ಹಿಡಿತ ಸಡಿಲಗೊಂಡಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಎರಡು ಪಕ್ಷಗಳ ಜತೆ ಇನ್ನೂ ಕೆಲವು ಪಕ್ಷಗಳು ಸ್ಪರ್ಧೆಗಿಳಿಯಲಿದ್ದು, ಬಹುಮುಖ ಅಥವಾ ಬಹುಪಕ್ಷೀಯ ಸ್ಪರ್ಧೆಗೆ ವೇದಿಕೆಯಾಗಲಿದೆ.

ತಮಿಳುನಾಡಿನ ಮತದಾರರ ಪೈಕಿ ಶೇ. ೬೦ ರಿಂದ ೭೦ ರಷ್ಟು ಮತಗಳ ಮೇಲೆ ಹಿಡಿತ ಸಾಧಿಸಿದ್ದ ಡಿಎಂಕೆ ಹಾಗೂ ಎಐಎಡಿಎಂಕೆಗಳು ಈಗಲೂ ಅದೇ ಪ್ರಾಬಲ್ಯ ಮೆರೆಯಲಿವೆ ಎಂದು ಹೇಳುವುದು ಕಷ್ಟವಾಗಲಿದೆ.

ಪ್ರಬಲ ಎರಡು ಪಕ್ಷಗಳ ನಡುವೆಯೂ ಸಣ್ಣಪುಟ್ಟ ರಾಜಕೀಯ ಪಕ್ಷಗಳು ಅಸ್ತಿತ್ವ ಕಂಡುಕೊಂಡಿದ್ದು, ಅವು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗಿಲ್ಲ.

೨೦೧೪ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ, ಶೇ. ೧೮.೫ರಷ್ಟು ಮತಗಳಿಸಿ, ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ವಿಜಯಕಾಂತ್ ನೇತೃತ್ವದ ಪಿಎಂಪಿಕೆ ಈ ಬಾರಿಯ ಚುನಾವಣೆಯಲ್ಲಿ ದ್ರಾವಿಡ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳಲು ಬಯಸದ ಕಾರಣ ಬಹುಪಕ್ಷೀಯ ಸ್ಪರ್ಧೆ ಎದುರಾಗಲಿದೆ.

ಅಲ್ಲದೆ, ಪಟ್ಟಾಳಿ ಮಕ್ಕಳ ಕಚ್ಚಿ(ಪಿಎಂಕೆ) ವೈಕೋ ನೇತೃತ್ವದ ಎಂಡಿಎಂಕೆ ಹಾಗೂ ಎಡಪಕ್ಷಗಳೂ ಸ್ಪರ್ಧೆಗಿಳಿಯಲಿದೆ. ರಾಜಕೀಯದಲ್ಲಿ ಶಾಶ್ವತ ಮಿತ್ರರಿಲ್ಲ, ಶಾಶ್ವತ ಶತ್ರುಗಳೂ ಇರಲಾರರು ಎಂಬ ನಾಣ್ಣುಡಿಯಂತೆ, ಕಾಂಗ್ರೆಸ್ ಹೊರತುಪಡಿಸಿ ಉಳಿದ ಸಣ್ಣಪುಟ್ಟ ರಾಜಕೀಯ ಪಕ್ಷಗಳು ಒಂದಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ವಿಜಯಕಾಂತ್, ಕಿಂಗ್ ಮೇಕರ್‌ಗೆ ಬದಲಾಗಿ ತಾನೇ ‘ಕಿಂಗ್ ಆಗಬೇಕೆಂಬ ಬಯಕೆ ಹೊಂದಿರುವಂತಿದೆ. ಆದರೆ ರಾಜಕೀಯ ವಿಶ್ಲೇಷಣಕರ ಪ್ರಕಾರ ಇದು ಸಾಧ್ಯವಿಲ್ಲ. ಶೇ. ೧೦ಕ್ಕಿಂತ ಕಡಿಮೆ ಮತಗಳ ಮೇಲೆ ಹಿಡಿತ ಸಾಧಿಸಿರುವ ಅವರು, ಕಿಂಗ್ ಮೇಕರ್ ಆಗಬಹುದಷ್ಟೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Write A Comment