
ಕೆಲದಿನಗಳ ಬಿಡುವಿನ ನಂತರ ನಿರ್ದೇಶಕ ಸುಧಾಕರಬನ್ನಂಜೆ ಅವರು ರಣರಣಕ ಎನ್ನುವ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.!
ಪ್ರೀತಿಸಿದವಳು ಕೈಕೊಟ್ಟಾಗ ಉಂಟಾಗುವ ನೋವು, ಪ್ರೇಯಸಿಯು ದೂರವಾದಾಗ ಆಗುವ ವೇದನೆ ಪ್ರಿಯತಮೆ ಅಗಲಿದಾಗ ಎದುರಿಸಬೇಕಾದ ಯಾತನೆಯನ್ನು ’ರಣರಣಕ’ ಎನ್ನುತ್ತಾರೆ ಅದನ್ನೇ ನನ್ನ ಹೊಸ ಚಿತ್ರಕ್ಕೆ ಶೀರ್ಷಿಕೆಯಾಗಿದೆ ಎನ್ನುತ್ತಾರೆ ನಿರ್ದೇಶಕ ಸುಧಾಕರಬನ್ನಂಜೆ.
ರಣರಣಕ ನನ್ನ ಶಿಷ್ಯ ದಿವಾಕರ್ ಬರೆದ ಕತೆಗೆ ಚಿತ್ರಕತೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದೇನೆ ರಾಮನಗರದ ತಿಮ್ಮಪ್ಪನ ಬೆಟ್ಟದಿಂದ ಚಿತ್ರೀಕರಣ ಆರಂಭಿಸಿ ಬೈಂದೂರು, ಸಕಲೇಶಪುರ, ಉಡುಪಿ, ಕನಕಪುರದಲ್ಲಿ ಮೇ ತಿಂಗಳ ಒಳಗೆ ಮುಗಿಸಲು ತಂಡವು ಯೋಜನೆ ಹಾಕಿಕೊಂಡಿದೆ ಎನ್ನುತ್ತಾರೆ.
ಹೊಸಬರಿಗೆ ಅವಕಾಶ ಮಾಡಿಕೊಡುವ ದಿಸೆಯಲ್ಲಿ ಬರೋಬರಿ ಒಂದು ಸಾವಿರ ಮಂದಿಯ ಅಡಿಷನ್ ನಡೆಸಿ ನಾಯಕ, ನಾಯಕಿಯರನ್ನು ಆಯ್ಕೆಮಾಡಲಾಗಿದೆ .ಕಿರುತೆರೆ ಧಾರವಾಹಿಗಳಲ್ಲಿ ಖಳನಟನಾಗಿದ್ದ ಮಂಡ್ಯಾದ ಶಶಿರಾಜ್ ಮತ್ತು ತುಮಕೂರಿನ ದಿವ್ಯಾಗೌಡ ನಾಯಕ ನಾಯಕಿಯರಾಗಿದ್ದಾರೆ ದಿವ್ಯಾಗೌಡ ಸಂಭ್ರಮ ಹೆಸರಿನೊಂದಿಗೆ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಎಂದು ಚಿತ್ರದ ವಿವರ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಕತೆ ರಚಿಸಿರುವ ನಿರ್ದೇಶಕರ ಶಿಷ್ಯ ದಿವಾಕರ್ ರಣರಣಕಕ್ಕೆ ನಾಲ್ಕು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಜೊತೆಗೆ ಹಣ ಹೊಡಿ ನಿರ್ಮಾಪಕರಾಗಿದ್ದಾರೆ, ಶೋಭರಾಜ್, ಹೊನ್ನವಳ್ಳಿಕೃಷ್ಣ, ಟೆನ್ನಿಸ್‌ಕೃಷ್ಣ, ಹಾಗೂ ರಂಗಭೂಮಿ ಕಲಾವಿದರು ಅಭಿನಯಿಸಲಿದ್ದಾರೆ. ರಾಜೇಶ್‌ರಾಮ್‌ನಾಥ್ ಸಂಗೀತ ಸಂಯೋಜನೆಯಲ್ಲಿ ರಾಜೇಶ್‌ರಾಮನಾಥ್,ಅನುರಾಧಭಟ್, ಅಜಯ್ ವಾರಿಯರ್,ಹೇಮಂತ್ ಮತ್ತು ನಟ ಶ್ರೀಮುರಳಿ ಹಾಡುಗಳಿಗೆ ಧ್ವನಿಯಾಗಲಿದ್ದಾರೆ. ಛಾಯಗ್ರಹಣ ನಾಗರಾಜಅದ್ವೈತ, ಕಲಾನಿರ್ದೇಶನ ತಮ್ಮಲಕ್ಷ್ಮಣ್ ಅವರದಾಗಿದೆ.