ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದರೆ ಜಾಗತಿಕ ತೊಂದರೆ ಎದುರಾಗುವುದಾಗಿ ಇಂಗ್ಲೆೆಂಡ್ನ ಸಂಶೋಧನಾ ಸಂಸ್ಥೆೆ ಇಐಯು ಹೇಳಿದೆ.
ಇತ್ತೀಚೆಗಷ್ಟೆೆ ಇಂಗ್ಲೆೆಂಡ್ನ ಆರ್ಥಿಕ ತಜ್ಞರ ಸಮಿತಿ ಜಾಗತಿಕ ಅಪಾಯ ಮೌಲ್ಯಮಾಪನದ ಆವೃತ್ತಿ ಬಿಡುಗಡೆ ಮಾಡಿದ್ದು, ಚೀನಾದಲ್ಲಿ ಈಗಾಗಲೆ ಆರ್ಥಿಕ ಮುಗ್ಗಟ್ಟಿದೆ. ಅಲ್ಲದೆ ಚೀನಾಕ್ಕೆೆ ಹಣದ ಅಪಮೌಲ್ಯ ಮಾಡುತ್ತಿರುವ ರಾಷ್ಟ್ರ ಎಂಬ ಹಣೆಪಟ್ಟಿ ನೀಡಲಾಗಿದೆ. ಟ್ರಂಪ್ ಅಧ್ಯಕ್ಷರಾದರೆ ಚೀನಾದ ಆರ್ಥಿಕತೆಗೆ ಮತ್ತಷ್ಟು ಧಕ್ಕೆ ಬರಲಿದೆ ಎಂದಿದ್ದಾರೆ.
ಅಲ್ಲದೆ ಅವರ ಹೊಸ ನೀತಿಗಳಿಂದಾಗಿ ವಿಶ್ವದ ಅನೇಕ ರಾಷ್ಟ್ರಗಳ ಮೇಲೆ ಪರಿಣಾಮ ಬೀರಲಿದೆ. ಮುಕ್ತ ಆರ್ಥಿಕ ನೀತಿಯ ಮೇಲೆ ಟ್ರಂಪ್ ಹಿಡಿತ ಸಾಧಿಸುವ ಸಾಧ್ಯತೆ ಇದೆ. ಈಗಾಗಲೆ ಮುಸ್ಲೀಂ ವಿರೋಧಿ ಹೇಳಿಕೆ ನೀಡಿರುವ ಟ್ರಂಪ್ ಮಧ್ಯ ಪೂರ್ವ ರಾಷ್ಟ್ರಗಳು ಹಾಗೂ ಜಿಹಾದಿ ಉಗ್ರರ ಮೇಲೆ ಹಿಡಿತ ಸಾಧಿಸುವ ಯತ್ನ ನಡೆಸಲಿದ್ದಾರೆ. ಈ ಹಿನ್ನೆೆಲೆಯಲ್ಲಿ ಉಗ್ರರ ಕುಟುಂಬಸ್ಥರನ್ನು ಕೊಲ್ಲುವುದಲ್ಲದೆ ಐಸಿಸ್ ಉಗ್ರರನ್ನು ನಿರ್ನಾಮ ಮಾಡಲು ಸಿರಿಯಾದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಜತೆಗೆ ಅನೇಕ ರಾಷ್ಟ್ರಗಳ ಶಾಂತಿ ಕದಡುವ ಕೆಲಸಗಳು ನಡೆಯಲಿವೆ ಎಂದು ಸಂಶೋಧನಾ ಸಂಸ್ಥೆೆ ಹೇಳಿದೆ.
ಟ್ರಂಪ್ ಭಾಷೆಯ ಬಗ್ಗೆೆ ಚರ್ಚೆ ಹುಟ್ಟಿಕೊಳ್ಳುತ್ತಿದ್ದು, ಅವರು ಬಳಸುವ ಇಂಗ್ಲಿಷ್ ವ್ಯಾಕರಣ ಪ್ರಾಥಮಿಕ ಶಾಲೆಯ ಮಕ್ಕಳು ಬಳಸುವಂತಿದೆ ಎಂದು ಸಂಶೋಧಕರು ಹೇಳಿದ್ದಾರೆ. ಪಿಟ್ಸ್ ಬರ್ಗ್ ನ ಭಾಷಾ ತಂತ್ರಜ್ಞಾನ ಸಂಸ್ಥೆೆ ಈ ಸಂಶೋಧನೆ ಕೈಗೊಂಡಿದ್ದು, 11ರಿಂದ 13 ವಯಸ್ಸಿನ ಮಕ್ಕಳು ಮಾತನಾಡುವಂತೆ ಟ್ರಂಪ್ ಮಾತನಾಡುತ್ತಾರೆ ಎಂದಿದೆ.
ಅಲ್ಲದೆ ಟ್ರಂಪ್ ಹಾಗೂ ಹಿಲರಿ ಕ್ಲಿಂಟನ್ ನಡುವೆ ಸಾಕಷ್ಟು ಭಾಷಾ ಭಿನ್ನತೆ ಇರುವುದಾಗಿ ಹೇಳಿದೆ. ಈ ಹಿಂದಿನ ಅಮೆರಿಕ ಅಧ್ಯಕ್ಷರ ಭಾಷೆಯ ಬಗ್ಗೆೆಯೂ ಅಧ್ಯಯನ ನಡೆಸಲಾಗಿದ್ದು, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಐದನೇ ದರ್ಜೆ ಪಡೆದುಕೊಂಡಿದ್ದರೆ, ಟ್ರಂಪ್ ಭಾಷೆ ಆರನೇ ದರ್ಜೆಯ ಮಟ್ಟಕ್ಕಿಂತ ಕೆಳಗಿದೆ ಎನ್ನಲಾಗಿದೆ.