
ಕೋಲ್ಕತ್ತಾ: ಬಾಲಿವುಡ್ ದಂತಕಥೆ ಅಮಿತಾಬ್ ಬಚ್ಚನ್ ಮತ್ತು ಪಾಕಿಸ್ತಾನದ ಸಂಗೀತಗಾರ ಶಫಖತ್ ಅಮನತ್ ಆಲಿ ಇದೇ 19ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಭಾರತ-ಪಾಕಿಸ್ತಾನ ಟ್ವಂಟಿ-20 ವಿಶ್ವಕಪ್ ಪಂದ್ಯ ಆರಂಭಕ್ಕೆ ಮುನ್ನ ಎರಡೂ ದೇಶಗಳ ರಾಷ್ಟ್ರಗೀತೆಗಳನ್ನು ಹಾಡಲಿದ್ದಾರೆ.
ಬಿಗ್ ಬಿ ನಿನ್ನೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ತಾವು ಪಂದ್ಯದ ವೇಳೆ ಉಪಸ್ಥಿತರಿರುವುದಾಗಿ ದೃಢಪಡಿಸಿದ್ದಾರೆ. ”@ಸೀನಿಯರ್ ಬಚ್ಚನ್ ಭಾರತ-ಪಾಕಿಸ್ತಾನ ಟ್ವಂಟಿ-20 ವಿಶ್ವಕಪ್ ಪಂದ್ಯದ ವೇಳೆ ರಾಷ್ಟ್ರಗೀತೆಯನ್ನು ಹಾಡಲಿದ್ದಾರೆ” ಎಂದು ಅವರು ಬರೆದುಕೊಂಡಿದ್ದಾರೆ.
ಇನ್ನು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಮೂಲಗಳು, ಆಲಿ ಅವರು ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಹಾಡಲಿದ್ದಾರೆ ಎಂದು ದೃಢಪಡಿಸಿವೆ.