ಮನೋರಂಜನೆ

ರಾಧಿಕಾ ನಮ್ಮ ಸಂಪರ್ಕದಲ್ಲೂ ಇಲ್ಲ,ಸಿನಿಮಾ ನಿಂತಿದೆ: ನಿರ್ದೇಶಕ ರಘುರಾಮ್

Pinterest LinkedIn Tumblr

4_0ರಾಧಿಕಾ ಕುಮಾರಸ್ವಾಮಿ ಮತ್ತೆ ಬಣ್ಣ ಹಚ್ಚಿದ್ದಾರಂತೆ, “ನಮಗಾಗಿ’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರಂತೆ … ಕಳೆದ ಮೂರ್‍ನಾಲ್ಕು ದಿನಗಳಿಂದ ಇಂತಹ ಸುದ್ದಿಯೊಂದು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ರಾಧಿಕಾ ಬಣ್ಣ ಹಚ್ಚಿದ ಸುದ್ದಿ ಇಷ್ಟೊಂದು ಸದ್ದು ಮಾಡಲು ಕಾರಣ, ಸದ್ಯ ರಾಧಿಕಾ ಎಲ್ಲೂ ಕಾಣಿಸಿಕೊಳ್ಳದ್ದು. ಜೊತೆಗೆ ರಾಧಿಕಾ ಬೆಂಗಳೂರು ಬಿಟ್ಟು ಮಂಗಳೂರಿನಲ್ಲಿ ಸೆಟ್ಲ ಆಗಿದ್ದಾರಂತೆ ಎಂಬ ಸುದ್ದಿಯಿಂದಾಗಿ ರಾಧಿಕಾ ಮತ್ತೆ ಬಣ್ಣ ಹಚ್ಚಿದ್ದು ಕೂಡಾ ಸೌಂಡ್‌ ಮಾಡುತ್ತಿದೆ.

ರಘುರಾಮ್‌ ನಿರ್ದೇಶನದ “ನಮಗಾಗಿ’ ಚಿತ್ರದ ಒಂದಷ್ಟು ಚಿತ್ರೀಕರಣ ನಡೆದಿದ್ದು, ಇನ್ನೂ ಸಾಕಷ್ಟು ಬಾಕಿ ಇದೆ. ಇತ್ತ ಕಡೆ ರಾಧಿಕಾ ತಮ್ಮದೇ ವೈಯಕ್ತಿಕ ಕೆಲಸಗಳಿಂದ ಬಿಝಿಯಾಗಿದ್ದು, ಸಿನಿಮಾದಿಂದ ದೂರವೇ ಉಳಿದಿದ್ದರು. ಈಗ ಮತ್ತೆ ಚಿತ್ರೀಕರಣ ಆರಂಭವಾಗಿದೆ ಎಂಬ ಸುದ್ದಿ ಹಬ್ಬಿದೆ. ಆದರೆ, ನಿರ್ದೇಶಕ ರಘುರಾಮ್‌ ಮಾತ್ರ ಈ ಸುದ್ದಿಯನ್ನು ಅಲ್ಲಗಳೆಯುತ್ತಾರೆ.

“ನಾನು ಆ ಚಿತ್ರದ ನಿರ್ದೇಶಕ. ನನಗೆ ಗೊತ್ತಿಲ್ಲದೇ ಚಿತ್ರೀಕ ಆಗಲು ಸಾಧ್ಯವಿಲ್ಲ. ಸದ್ಯಕ್ಕೆ ಸಿನಿಮಾ ನಿಂತು ಒಂದು ವರ್ಷ ಆಗುತ್ತಾ ಬಂತು. ನಾನು ಕೂಡಾ ಆ ಚಿತ್ರದ ಚಿತ್ರೀಕರಣಕ್ಕಾಗಿ ಕಾಯುತ್ತಿದ್ದೇನೆ. ರಾಧಿಕಾ ಅವರು ಕೂಡಾ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. ಕೆಲ ದಿನಗಳ ಹಿಂದೆ ಅವರ ಸಹೋದರನ ಜೊತೆ ಮಾತನಾಡಿದೆಯಷ್ಟೇ. ಸಿನಿಮಾ ಮತ್ತೆ ಯಾವಾಗ ಆರಂಭವಾಗುತ್ತದೋ ಗೊತ್ತಿಲ್ಲ. ನಾನಂತೂ ಒಂದು ವರ್ಷದಿಂದ ಆ ಸಿನಿಮಾಕ್ಕಾಗಿ ಕಾಯುತ್ತಾ ಕುಳಿತಿದ್ದೇನೆ. ಆದರೆ, ಈಗ “ನಮಗಾಗಿ’ ಚಿತ್ರೀಕರಣ ಆರಂಭವಾಗಿದೆ ಎಂಬ ಸುದ್ದಿ ಹೇಗೆ ಹುಟ್ಟುಕೊಂಡಿತೋ ಗೊತ್ತಿಲ್ಲ. ಸುಮಾರು ಒಂದು ವರ್ಷದಿಂದ ನಾನು ಕೂಡಾ ಆ ಸಿನಿಮಾಕ್ಕಾಗಿ ಎದುರು ನೋಡುತ್ತಿದ್ದೇನೆ. ಆದರೆ ಮತ್ತೆ ಆ ಸಿನಿಮಾ ಯಾವಾಗ ಆರಂಭವಾಗುತ್ತದೋ ನನಗೇ ಗೊತ್ತಿಲ್ಲ. ಹಾಗಾಗಿ, ನನ್ನ ಕೆರಿಯರ್‌ ಅನ್ನು ನಾನು ನೋಡಿಕೊಳ್ಳಬೇಕು. ಏಪ್ರಿಲ್‌ನಲ್ಲಿ ಹೊಸ ಪ್ರಾಜೆಕ್ಟ್ ಆರಂಭಿಸುತ್ತಿದ್ದೇನೆ. ಅದು ಬಿಟ್ಟರೆ “ನಮಗಾಗಿ’ ಆರಂಭವಾಗಿಲ್ಲ’ ಎಂಬುದು ರಘುರಾಮ್‌ ಮಾತು.

ಈ ನಡುವೆಯೇ ರಾಧಿಕಾ ಮಂಗಳೂರು ಬದಲು ಬೆಂಗಳೂರಿನಲ್ಲೇ ಇದ್ದು, ತಮ್ಮ ಬಿಝಿನೆಸ್‌ ಕಾರ್ಯಗಳಲ್ಲಿ ಬಿಝಿಯಾಗಿದ್ದಾರೆಂಬ ಸುದ್ದಿಯೂ ಇದೆ. ಆದರೆ, ರಾಧಿಕಾ ಮಾತ್ರ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
-ಉದಯವಾಣಿ

Write A Comment