ಬೆಂಗಳೂರು : ನನ್ನ ಪ್ರತಿಭೆಯನ್ನು ಚಿತ್ರರಂಗ ಸರಿಯಾಗಿ ಗುರುತಿಸಿದ್ದರೆ ನಾನು ಭಾರತ ಮಟ್ಟದ ನಟನಾಗುತ್ತಿದ್ದೆ ಎಂದು ನವರಸ ನಾಯಕ ಜಗ್ಗೇಶ್ ತಮ್ಮ ಚಿತ್ರರಂಗದ ಕುರಿತ ಅಸಮಧಾನ ಹೊರಹಾಕಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ವಿನೂತನ ಪ್ರಯೋಗಗಳೇ ನಡೆಯುತ್ತಿಲ್ಲ ಎಂದರು.
ನಾನು ಇಲ್ಲಿಯ ವರೆಗೆ ಸಹ ನಟ, ನಾಯಕ ನಟನಾಗಿ ,ನಿರ್ಮಾಪಕ, ನಿರ್ದೇಶಕ,ವಿತರಕನಾಗಿ ಕೆಲಸ ಮಾಡಿದ್ದೇನೆ.ನನಗೆ ಇದುವರೆಗೆ ನಾನು ಮಾಡಿದ ಯಾವುದೇ ಪಾತ್ರಗಳು ತ್ರಪ್ತಿ ನೀಡಿಲ್ಲ ಎಂದರು.
-ಉದಯವಾಣಿ