ಕನ್ನಡ ವಾರ್ತೆಗಳು

ಕುಂದಾಪುರ: ದೇವಲ್ಕುಂದ ಮೀನು(?) ಫ್ಯಾಕ್ಟರಿ ನಿರ್ಮಾಣ ವಿಚಾರ; ಮನವಿಯಲ್ಲೇ ಪ್ರತಿಭಟಿಸಿದ ಜಯಕರ್ನಾಟಕ! ಸ್ಥಳೀಯರ ಆಕ್ರೋಷ

Pinterest LinkedIn Tumblr

ಕುಂದಾಪುರ: ತಾಲೂಕಿನ ಕಟ್‌ಬೆಲ್ತೂರ್ ಗ್ರಾಮಪಂಚಾಯತ್ ವ್ಯಾಪ್ತಿಯ ದೇವಲ್ಕುಂದ ಎಂಬಲ್ಲಿ ನಿರ್ಮಿಸಲು ಉದ್ದೇಶಿಸಲಾದ ಕೋಟಿಗಟ್ಟಲೇ ಅಂದಾಜು ವೆಚ್ಚದ ಮೀನುಸಂಸ್ಕರಣಾ ಘಟಕದ ಕಟ್ಟಡಕ್ಕೆ ಯಾವುದೇ ಒಳಿತು ಕೆಡುಕನ್ನು ಪರಾಮರ್ಶಿಸದೇ ಪರವಾನಿಗೆ ನೀಡಿದೆ ಇದನ್ನು ರದ್ಧುಪಡಿಸಬೇಕೆಂದು ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಮಂಗಳವಾರ ಪ್ರತಿಭಟನೆ ನಡೆಸುವ ಹೇಳಿಕೆಯನ್ನು ನೀಡಿತ್ತು. ಆದರೇ ಅಲ್ಲಿ ನಡೆದಿದ್ದು ಮಾತ್ರ ಬೇರೆಯೇ. ಪತ್ರಿಕಾಗೋಷ್ಟಿಯಲ್ಲಿ ಮೀನು ಸಂಸ್ಕರಣಾ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ್ದ ಜಯಕರ್ನಾಟಕ ಪ್ರತಿಭಟನೆ ನಡೆಸಲಿಲ್ಲ..ಬದಲಾಗಿ ಅಲ್ಲಿ ನಡೆದಿದ್ದೇನು.? ಈ ವರದಿ ನೋಡಿ……..

Devakunda_Fishmeal_Protest problem (7) Devakunda_Fishmeal_Protest problem (4) Devakunda_Fishmeal_Protest problem (10) Devakunda_Fishmeal_Protest problem (9) Devakunda_Fishmeal_Protest problem (8) Devakunda_Fishmeal_Protest problem (12) Devakunda_Fishmeal_Protest problem (5) Devakunda_Fishmeal_Protest problem (6) Devakunda_Fishmeal_Protest problem (11) Devakunda_Fishmeal_Protest problem (3) Devakunda_Fishmeal_Protest problem (15) Devakunda_Fishmeal_Protest problem (13) Devakunda_Fishmeal_Protest problem (14)

ಮಂಗಳವಾರ ಬೆಳಿಗ್ಗೆ 10ಗಂಟೆಗೆ ಕಟ್ ಬೆಲ್ತೂರು ಗ್ರಾಮಪಂಚಾಯತ್ ಎದುರು ನೂರಾರು ಜನರು ಸೇರಿದ್ದರು. ಅವರೆಲ್ಲರ ಮುಖದಲ್ಲಿ ಸಾಧಿಸುವ ಛಲವಿತ್ತು. ತಮಗೆ ಬೆಂಬಲ ಸಿಗುವ ಭರವಸೆಯಿತ್ತು. ಯಾಕೇಂದರೇ ಆ ಪ್ರತಿಭಟನೆಯ ಜವಬ್ದಾರಿಯನ್ನು ಜಯಕರ್ನಾಟಕ ಸಂಘಟನೆ ಹೊತ್ತಿದೆಯೆಂಬ ಆತ್ಮವಿಶ್ವಾಸ ಅವರಲ್ಲಿತ್ತು. ಆದರೇ ಕೆಲವೇ ಹೊತ್ತಿನಲ್ಲಿ ಜನರ ಎಲ್ಲಾ ನಿರೀಕ್ಷೆಗಳು ಬದಲಾಗಿದ್ದವು. ಜನರ ಹಾಗೂ ಗ್ರಾಮದ ಪರವಾಗಿ ಹೋರಾಟ ಧರಣಿ ಮಾಡಲು ಬಂದಿದ್ದ ಸಂಘಟನೆ ಮುಖಂಡರು ತಮ್ಮ ವರಸೆ ಬದಲಿಸಿದ್ದರು. ಇಲ್ಲಿ ನಡೆಯುತ್ತಿರುವುದು ಕೇವಲ ಮೀನು ಶಿಥಲೀಕರಣ ಘಟಕ ಬದಲಾಗಿ ಮೀನು ಸಂಸ್ಕರಣಾ ಘಟಕವಲ್ಲ. ಶೀಥಲೀಕರಣ ಘಟಕ ನಿರ್ಮಾಣಕ್ಕೆ ಬೇಕಾದ ಪರವಾನಿಗೆಯನ್ನು ಸಂಬಂದಪಟ್ಟ ಇಲಾಖೆಯಿಂದಲೂ ಅವರು ಪಡೆದಿದ್ದಾರೆ. ಈ ಬಗ್ಗೆ ಮಾಲೀಕರು ನಮಗೆ ಸ್ಪಷ್ಟಪಡಿಸಿದ್ದು ಸದ್ಯಕ್ಕೆ ನಾವು ಪ್ರತಿಭಟನೆ ಮಾಡುವುದು ಬೇಡ. ಯಾವುದೇ ಕಾರಣಕ್ಕೂ ಮೀನು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಮಾತ್ರ ಆಸ್ಪದ ಕೊಡುವುದು ಬೇಡ ಎಂದು ಜಯಕರ್ನಾಟಕ ಸಂಘಟನೆ ಜಿಲ್ಲಾ ಗೌರವ ಸಲಹೆಗಾರ ಸುಧಾಕರ್ ರಾವ್ ಹೇಳುತ್ತಲೇ ಜನರು ಗರಂ ಆದರು.

Devakunda_Fishmeal_Protest problem (2) Devakunda_Fishmeal_Protest problem (16) Devakunda_Fishmeal_Protest problem (1)

ಜನರು ಏನು ಹೇಳಿದ್ರು ಗೊತ್ತಾ?
ನಮಗೆ ನ್ಯಾಯ ಸಿಗುತ್ತದೆ, ನಮ್ಮ ಕಷ್ಟ ಪರಿಹಾರವಾಗುತ್ತದೆಯೆಂಬ ನಿಟ್ಟಿನಲ್ಲಿ ಈ ಧರಣಿಗೆ ಬಂದಿದ್ದೇವೆ ಸ್ವಾಮೀ….ಸಂಘಟನೆ ಧರಣಿಗೂ ನಾವು ಬೆಂಬಲ ನೀಡಿದ್ದು ನೀವು ನಮ್ಮ ಜೊತೆಗೀರುತ್ತೀರಿ ಎಂದು. ಆದರೇ ನೀವು ವರಸೆ ಬದಲಿಸಿದ್ದು ನಮಗೆ ಇರಿಸುಮುರಿಸು ಉಂಟು ಮಾಡುತ್ತಿದೆ. ದಯವಿಟ್ಟು ನಮಗೆ ಇಂತಹ ಬೆಂಬಲ ಅಗತ್ಯವಿಲ್ಲ. ನಮ್ಮ ಊರು ದೇವಲ್ಕುಂದದಲ್ಲಿ ಮೀನು ಸಂಸ್ಕರಣಾ ಘಟಕವೂ ಬೇಡ ಶಿಥಲೀಕರಣ ಘಟಕವೂ ಬೇಡ. ಮೀನಿಗೆ ಸಂಬಂದಪಟ್ಟ ಯಾವ ಕೈಗಾರಿಕೆ ಘಟಕ ನಮ್ಮೂರಲ್ಲಿ ಬೇಕಾಗಿಲ್ಲ. ಒಂದೊಮ್ಮೆ ಇದಕ್ಕೆ ಯಾರಾದರೂ ಮುಂದಾದರೇ ನಾವು ಸುಮ್ಮನಿರಲ್ಲ ಎಂದು ಖಡಕ್ ವಾರ್ನ್ ಮಾಡಿಯೇ ಬಿಟ್ಟರು.

ಗ್ರಾಮಪಂಚಾಯತ್ ತನ್ನ ನಿಲುವನ್ನು ಹಿಂಪಡೆದು ಪರವಾನಿಗೆ ರದ್ಧುಗೊಳಿಸಬೇಕು ಹಾಗೂ ಗ್ರಾಮದ ಹಿತಕಾಪಾಡುವಂತೆ ಗ್ರಾಮಪಂಚಾಯತನ್ನು ಎಚ್ಚರಿಸಲು ಬಂದ ಜಯಕರ್ನಾಟಕ ಸಂಘಟನೆಯವರೂ ಕೊನೆಗೂ ಜನರ ಆಕ್ರೋಶದ ನಡುವೆಯೇ ಪಂಚಾಯತಿಗೆ ತಮ್ಮದೊಂದು ಮನವಿ ನೀಡಿ ಹೊರಟೇ ಬಿಟ್ಟರು. ಆದರೇ ನಿರೀಕ್ಷೆ ಇಟ್ಟುಕೊಂಡು ಕೆಲಸ ಕಾರ್ಯ ಬಿಟ್ಟು ಇಲ್ಲಿಗೆ ಬಂದ ಜನ ಮಾತ್ರ ಬಂದ ದಾರಿಗೆ ಸುಂಕವಿಲ್ಲ ಎಂದು ಹೊರಟರು. ಸಂಘಟನೆಯ ಜಿಲ್ಲಾ ಪದಾಧಿಕಾರಿಗಳು ಮಾಡಿದ ಈ ಎಡವಟ್ಟು ಸಂಘಟನೆಯ ಸ್ಥಳೀಯ ಪದಾಧಿಕಾರಿಗಳಿಗೂ ಕೊಂಚ ಇರಿಸುಮುರಿಸು ಉಂಟುಮಾಡಿತ್ತು. ಜನರೊಂದಿಗೆ ನಾವಿದ್ದೇವೆ,ಯಾವ ಕಾರಣಕೂ ಇಲ್ಲಿ ಮೀನಿನ ಯಾವ ಘಟಕ ಸ್ಥಾಪನೆಯಾಗಲೂ ಬಿಡಲ್ಲ. ಜನರ ಅಭಿಪ್ರಾಯಕ್ಕೆ ಬದ್ಧ ಎಂದು ಸ್ಥಳೀಯ ಮುಖಂಡರು ತಮ್ಮ ಅಭಿಪ್ರಾಯ ಹೇಳಿದ್ರು.

ಪೊಲೀಸ್ ಅಧಿಕಾರಿ ಕಛೇರಿಯಲ್ಲಿ ಮಾತುಕತೆ?
ಭಾನುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಪೊಲೀಸರು ಪ್ರತಿಭಟನೆಗೆ ಅವಕಾಶ ಕೊಡುತ್ತಿಲ್ಲ ಎಂದು ನೇರ ಆರೋಪ ಮಾಡಿದ್ದ ಸಂಘಟನೆಯವರು ಇಂದು ಮಾತ್ರ ಪೊಲೀಸರನ್ನು ಹೊಗಳಿ ಹಾಡಿದರು. ಸಂಘಟನೆಯವರೇ ಹೇಳುವ ಪ್ರಕಾರ ಕುಂದಾಪುರದ ಪೊಲೀಸ್ ಅಧಿಕಾರಿಯೋರ್ವರ ಕಛೇರಿಯಲ್ಲಿ ಸೋಮವಾರ ಸಂಜೆ ಮೀನು ಶಿಥಲೀಕರಣ ಘಟಕ ಆರಂಭಿಸುವ ಮಾಲೀಕರು ಮತ್ತು ಸಂಘಟನೆಯ ಮಾತುಕತೆ ನಡೆದಿದ್ದು ಈ ಸಂದರ್ಭದಲ್ಲಿ ಮಾಲೀಕರು ಎಲ್ಲಾ ದಾಖಲೆ ನೀಡಿ ತಾವು ಯಾವುದೇ ಸಂಸ್ಕರಣಾ ಘಟಕ ನಿರ್ಮಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದರು ಎಂದು ಜಯಕರ್ನಾಟಕ ಸಂಘಟನೆ ಜಿಲ್ಲಾ ಗೌರವಸಲಹೆಗಾರರು ತಿಳಿಸಿದ್ದಾರೆ.

ಮಾಧ್ಯಮದ ಬೆಂಬಲ ಅಗತ್ಯವಿಲ್ಲ!
‘ನಮ್ಮದು ಹಲವು ವರ್ಷಗಳಿಂದ ಜನಪರವಾಗಿ ನಡೆದುಬಂದ ಸಂಘಟನೆ. ನಮಗೆ ಪ್ರಚಾರದ ಅಗತ್ಯವಿಲ್ಲ, ಮಾಧ್ಯಮದವರ ಬೆಂಬಲವೂ ಇಲ್ಲದೇ ನಮ್ಮ ಕೆಲಸ ನಾವು ಮಾಡುತ್ತೇವೆ’ ಎಂದು ಸಾರ್ವಜನಿಕವಾಗಿ ಕೂಗಾಡಿದ್ದು ಸಂಘಟನೆಯ ಜಿಲ್ಲಾ ಪದಾಧಿಕಾರಿ ಅಣ್ಣಪ್ಪ ಕುಲಾಲ್. ಗ್ರಾಮಸ್ಥರ ಪರವಾಗಿ ಸಂಘಟನೆಯವರ ಬಳಿ ಕೆಲವು ಸ್ಪಷ್ಟನೆ ಕೇಳಿದ್ದೇ ಇವರ ಆಕ್ರೋಷಕ್ಕೆ ಕಾರಣವಾಗಿತ್ತು.

ಜಯಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಜನನಿ ದಿವಾಕರ್ ಶೆಟ್ಟಿ, ಹೆಮ್ಮಾಡಿ ಘಟಕಾಧ್ಯಕ್ಷ ಪ್ರಕಾಶ್ ಮೊಗವೀರ, ಗೌರವಾಧ್ಯಕ್ಷ ಯು. ಸತ್ಯನಾರಾಯಣ ರಾವ್, ಜಯಕರ್ನಾಟಕ ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಕರುಣಾಕರ ಪೂಜಾರಿ, ಜಿಲ್ಲಾ ಪದಾಧಿಕಾರಿ ನಿತ್ಯಾನಂದ ಅಮೀನ್, ಹೆಮ್ಮಾಡಿ ಗ್ರಾ,ಪಂ, ಮಾಜಿ ಅಧ್ಯಕ್ಷ ರಾಜು ಪೂಜಾರಿ ಹೆಮ್ಮಾಡಿ, ಹಟ್ಟಿಯಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ ಮೊದಲಾದವರಿದ್ದರು.

Write A Comment