ರಾಷ್ಟ್ರೀಯ

ಭಾರತೀಯ ಸೈನಿಕರಿಂದ ಕಾಶ್ಮೀರದಲ್ಲಿ ಅತ್ಯಾಚಾರ -ಕನ್ಹಯ್ಯ

Pinterest LinkedIn Tumblr

kanyaa
ದೆಹಲಿ:  ಭಾರತೀಯ ಸೈನಿಕರು ಕಾಶ್ಮೀರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಾರೆ ಎಂದು ಜೆಎನ್ ಯು ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗಷ್ಟೇ ದೇಶದ್ರೋಹದ ಆರೋಪದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಜವಹರ್ ಲಾಲ್ ನೆಹರು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಮಂಗಳವಾರ ಜೆಎನ್ ಯು ನಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.

ಸಶಸ್ತ್ರ ಪಡೆಗಳು ವಿಶೇಷ ಅಧಿಕಾರ ಕಾಯಿದೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು ಅದರ ವಿರುದ್ಧವೂ ನಾವು ದನಿ ಎತ್ತುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಫೆಬ್ರವರಿ 12 ರಂದು ಜೆಎನ್ ಯು ಆವರಣದಲ್ಲಿ ದೇಶದ್ರೋಹ ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಮೇಲೆ  ದೆಹಲಿ ಪೊಲೀಸರು ಕನ್ಹಯ್ಯ ಕುಮಾರ್ ಅವರನ್ನು ಬಂಧಿಸಿದ್ದರು.

Write A Comment