
ಭೋಪಾಲ್: ವಿಶ್ವದೆಲ್ಲೆಡೆ ಮಹಿಳೆಯರ ದಿನಾಚರಣೆ ಆಚರಿಸ್ತಿದ್ರೆ ಮಧ್ಯಪ್ರದೇಶದ ಇಂದೋರ್ನಲ್ಲೊಬ್ಬ ಮಹಾಶಯ ತನ್ನ ಹೆಂಡತಿಯನ್ನೇ ಫೇಸ್ಬುಕ್ನಲ್ಲಿ ಮಾರಾಟಕ್ಕಿಟ್ಟಿದ್ದಾನೆ.
ಪತ್ನಿ ಹಾಗೂ ಮೂರು ವರ್ಷದ ಮಗಳ ಫೋಟೋವನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದು, ಆಸಕ್ತರು ಸಂಪರ್ಕಿಸಿ ಅಂತ ಮೊಬೈಲ್ ನಂಬರ್ ಹಾಗೂ ತನ್ನ ವಿಳಾಸ ಬರೆದುಕೊಂಡಿದ್ದಾನೆ. ಅಷ್ಟೇ ಅಲ್ಲ ನಾನು ಹಲವರ ಬಳಿ ಹಣ ಸಾಲ ಪಡೆದಿದ್ದೇನೆ ಹಿಂತಿರುಗಿಸಲು ಪತ್ನಿಯನ್ನ ಮಾರಾಟಕ್ಕಿಟ್ಟಿದ್ದೇನೆ ಅಂತ ಹೇಳಿಕೊಂಡಿದ್ದಾನೆ. ಗಂಡನ ಈ ಹೇಯ ಕೃತ್ಯ ತಿಳಿದು ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.