
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಚಕ್ರವ್ಯೂಹ ಚಿತ್ರ ಸ್ಯಾಂಡಲ್ವುಡ್ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಚಿತ್ರ 500 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಇಷ್ಟು ದಾಖಲೆ ಪ್ರಮಾಣದಲ್ಲಿ ಕನ್ನಡ ಚಿತ್ರವೊಂದು ಬಿಡುಗಡೆಯಾಗುತ್ತಿದೆ.
ಚಕ್ರವ್ಯೂಹ ಚಿತ್ರ ಕರ್ನಾಟಕ ಅಲ್ಲದೆ ಹೊರರಾಜ್ಯ ಮುಂಬೈ, ದೆಹಲಿ, ಹೈದರಾಬಾದ್, ಪೂಣೆ ಮತ್ತು ಚೆನೈನ್ಲಲೂ ತೆರಕಾಣುತ್ತಿದೆ. ಅಲ್ಲದೇ, ಸಾಗರದಾಚೆ ಸಿಂಗಪೂರ್, ಆಸ್ಟ್ರೇಲಿಯಾ ಓಳಗೊಂಡಂತೆ ಒಟ್ಟು 11 ದೇಶಗಳಲ್ಲಿ ಒಟ್ಟಿಗೆ ತೆರೆಕಾಣುತ್ತಿದೆ.
ಚಿತ್ರಕ್ಕೆ ತಮಿಳಿನ ಆರ್ ಶರವಣನ್ ಆಕ್ಷನ್ ಕಟ್ ಹೇಳಿದ್ದು, ರಚಿತಾ ರಾಮ್ ನಾಯಕಿಯಾಗಿ ಪುನೀತ್ಗೆ ಸಾಥ್ ನೀಡಿದ್ದಾರೆ. ಈ ಚಿತ್ರ ಸದ್ಯಕ್ಕೆ ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನ ಹೆಚ್ಚಿಸಿದೆ. ಮಾರ್ಚ್ 12 ರಂದು ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಲಿದೆ.