ರಾಷ್ಟ್ರೀಯ

ಎಲ್ಲಾ ಖಾಸಗಿ ಶಾಲೆಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ

Pinterest LinkedIn Tumblr

1024px-Chennai_High_Courtತಮಿಳುನಾಡು: ಮುಂದಿನ ದಿನಗಳಲ್ಲಿ ತಮಿಳುನಾಡಿನ ಎಲ್ಲಾ ಖಾಸಗಿ ಶಾಲೆಗಳಲ್ಲಿ ಮುಂಜಾನೆಯ ವೇಳೆ ರಾಷ್ಟ್ರ ಗೀತೆಯನ್ನು ಹಾಡಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಇಂದು ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹಾಗೂ ಜಸ್ಟೀಸ್ ಎಂ ಎಂ ಸಂದೇಶ್ ಒಳಗೊಂಡ ನ್ಯಾಯಪೀಠ ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆಯನ್ನು ಹಾಡಬೇಕು ಎಂದು ನಿರ್ದೇಶನ ನೀಡಿದೆ.

“ನಮ್ಮ ರಾಜ್ಯದಲ್ಲಿ ಯಾವುದೇ ಖಾಸಗಿ ಶಾಲೆಗಳು ರಾಷ್ಟ್ರಗೀತೆಯನ್ನು ಹಾಡಿಸುತ್ತಿಲ್ಲ,ಈ ಹಿನ್ನಲೆಯಲ್ಲಿ ಖಾಸಗಿ ಶಾಲೆಗಳು ತಮ್ಮ ಪಠ್ಯದ ಭಾಗವಾಗಿ ರಾಷ್ಟ್ರಗೀತೆಯನ್ನು ತಮ್ಮ ಶಾಲೆಗಳಲ್ಲಿ ಹಾಡಿಸಬೇಕು” ಎಂದು ಕೋರಿ ಮಾಜಿ ಸೈನಿಕ ಎನ್ ಸರ್ವತಿರುಮಲ್ ಎಂಬವರು ಸಾರ್ವಜನಿಕ ಹಿತಾಸಕ್ತಿಯಲ್ಲಿ ಅರ್ಜಿ ಹಾಕಿದ್ದರು.

ಅರ್ಜಿ ಸ್ವೀಕರಿಸಿದ ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹಾಗೂ ಜಸ್ಟೀಸ್ ಎಂ ಎಂ ಸಂದೇಶ್ ಒಳಗೊಂಡಿದೆ ನ್ಯಾಯಪೀಠ ಇಂದು ಎಲ್ಲಾ ಶಾಲೆಗಳಲ್ಲಿ ಬೆಳಗ್ಗಿನ ವೇಳೆ ರಾಷ್ಟ್ರಗೀತೆಯನ್ನು ಹಾಡಬೇಕು. ಜಾರಿಗೆ ಬಂದ ನಿಯಮವನ್ನು ಎಲ್ಲಾ ಖಾಸಗಿ ಶಾಲೆಗಳು ಪಾಲಿಸಬೇಕು ಹಾಗೂ ಈ ವಿಚಾರವಾಗಿ ಕೇಂದ್ರ ಮತ್ತು ಪ್ರೌಢ ಶಿಕ್ಷಣ ಇಲಾಖೆಗಳು ಮತ್ತು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹೆಚ್ಚಿನ ಗಮನ ನೀಡಬೇಕೆಂದು ತೀರ್ಪನ್ನಿತ್ತಿದೆ.

Write A Comment