
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರ ಪತ್ನಿ ಅಮೃತಾ ಫಡ್ನಾವಿಸ್, ಪ್ರಿಯಾಂಕಾ ಚೋಪ್ರಾ ಅಭಿನಯದ ಬಾಲಿವುಡ್ ಚಿತ್ರ ಜೈ ಗಂಗಾಜಲ್‍ನಲ್ಲಿ ಹಾಡುವ ಮೂಲಕ ಬಾಲಿವುಡ್‍ಗೆ ಎಂಟ್ರಿ ನೀಡಿದ್ದಾರೆ.
ಪ್ರಕಾಶ್ ಜಾ ನಿರ್ದೇಶನದ ಈ ಚಿತ್ರಕ್ಕಾಗಿ ಅಮೃತಾ ಅವರು ಯಾವುದೇ ಸಂಭಾವನೆಯನ್ನು ಪಡೆಯದೆ ಭಕ್ತಿಗೀತೆಯೊಂದನ್ನು ಹಾಡಿದ್ದಾರೆ. ಈ ಹಾಡಿಗೆ ಸಲೀಮ್ ಮತ್ತು ಸುಲೇಮಾನ್ ಎಂಬವರು ಸಂಗೀತ ನಿರ್ದೇಶನ ಮಾಡಿದ್ದು ಮನೋಜ್ ಮುಂತಾಶಿರ್ ಸಾಹಿತ್ಯ ರಚಿಸಿದ್ದಾರೆ.
ಅಮೃತಾ ಅವರ ಪತಿ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಈ ಬಗ್ಗೆ ಏನಂತಾರೆ ಎಂದು ಕೇಳಿದ್ದಕ್ಕೆ, ಮಹಿಳಾ ಕೇಂದ್ರಿತ ಚಿತ್ರವಾದ ಜೈ ಗಂಗಾಜಲ್‍ನಲ್ಲಿ ಹಾಡಿರುವುದಕ್ಕೆ ನನ್ನ ಪತಿಗೆ ಸಂತೋಷವಿದೆ ಎಂದು ಅಮೃತಾ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.