ಕರ್ನಾಟಕ

ಬಣ್ಣದ ಮಾತಾಡಿ ಕೋಟ್ಯಾಂತರ ರೂ. ವಂಚಿಸಿದ; ಲೀ ಮೆರಿಡಿಯನ್ ಹೋಟೆಲ್‍ನಲ್ಲಿದ್ದು ಹಣ ಕೊಡದೇ ಎಸ್ಕೇಪ್

Pinterest LinkedIn Tumblr

escap

ಬೆಂಗಳೂರು: ಮಾತಿನಲ್ಲೇ ಮನೆಕಟ್ಟಿ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ. ಐಟಿ ಕಂಪನಿಗಳಿಗೆ ಪ್ರಾಜೆಕ್ಟ್ ಕೊಡೋದಾಗಿ ಲಕ್ಷ ಲಕ್ಷ ರೂ. ವಂಚನೆ ಮಾಡಿದ. ಲೀ ಮೆರಿಡಿಯನ್ ಹೋಟೆಲ್‍ನಲ್ಲಿ ಒಂದು ತಿಂಗಳ ವಾಸ್ತವ್ಯ ಹೂಡಿ ಹಣ ನೀಡದೆ ಕಾಲ್ಕಿತ್ತಿದ್ದ. ಯಾರಪ್ಪ ಈ ಚಾಲಾಕಿ ಖತರ್ನಾಕ್ ಅಂದ್ರಾ? ಈತನೇ ಖತರ್ನಾಕ್ ವಂಚಕ ವಿಶಾಲ್ ಚಿಪ್ಕರ್.

ಇಎಮ್‍ಎನ್ ಕನ್ಸಲ್ಟೆನ್ಸಿ ಸರ್ವಿಸ್ ಕಂಪನಿಯ ಎಂಡಿ. ಈತ ಆಸ್ಟ್ರೇಲಿಯಾ, ಬ್ರೆಜಿಲ್, ಇಂಗ್ಲೆಂಡ್‍ಗಳಲ್ಲಿ ನಮ್ಮ ಕಂಪನಿಯ ಶಾಕೆ ಇದೆ ಅಂತಾ ಹಲವಾರು ಜನ್ರಿಗೆ ಟೋಪಿ ಹಾಕಿದ್ದಾನೆ. ಬೆಂಗಳೂರಿನ ಪದ್ಮನಾಭನಗರದಲ್ಲಿರೋ ಶಾನಾರ್ಪ್ ಇಂಡಿಯಾ ಟೆಕ್ ಪ್ರೈವೇಟ್ ಲಿಮಿಟೆಡ್‍ನ ಎಂಡಿ ರಮೇಶ್ ಶೆಟ್ಟಿಯವರನ್ನ ಮಾತಲ್ಲೇ ಮರಳು ಮಾಡಿ ಅವರ ಕಂಪನಿಗೆ ಪ್ರಾಜೆಕ್ಟ್‍ಗಳನ್ನ ನೀಡೋದಾಗಿ ನಂಬಿಸಿ 40 ಲಕ್ಷ ರೂ. ಹಣ ಕಿತ್ತಿದ್ದಾನೆ.

ಈತ ಯಾವಾಗ ಮೋಸ ಮಾಡ್ತಿದ್ದಾನೆ ಅನ್ನೋದು ಅರಿವಿಗೆ ಗೊತ್ತಾಯ್ತೋ ರಮೇಶ್ ಶೆಟ್ಟಿ ಬನಶಂಕರಿ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ರು. ಪುಣೆಯಲ್ಲಿದ್ದ ಈತನನ್ನ ಹೆಡೆಮುರಿ ಕಟ್ಟಿ ಬೆಂಗಳೂರಿಗೆ ಕರೆತಂದು ವಿಚಾರಣೆ ಮಾಡಿದಾಗ ಈತನ ಮತ್ತಷ್ಟು ಅಸಲಿ ಪುರಾಣಗಳು ಬೆಳಕಿಗೆ ಬಂದವು. ಗಂಗಾವತಿಯಲ್ಲಿ ಶುಗರ್ ಫ್ಯಾಕ್ಟರಿ ಓಪನ್ ಮಾಡ್ತೀನಿ ಅಂತಾ ಬಾಡಿಗೆ ಹೆಲಿಕ್ಯಾಪ್ಟರ್‍ನಲ್ಲಿ ಬಂದಿಳಿದು ಅಲ್ಲೂ ಜನರಿಂದ ಲಕ್ಷಾಂತರ ರೂ. ಪಡೆದು ವಂಚಿಸಿರೋದು ಬೆಳಕಿಗೆ ಬಂದಿದೆ. ಈತನ ವಿರುದ್ಧ ನಾಗರಾಜ ಎನ್ನುವರು ಗಂಗಾವತಿ ನಗರ ಠಾಣೆಯಲ್ಲಿ ದೂರು ದಾಖಸಿದ್ರು. ವಿಚಾರಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಮತ್ತೆ ಅಮೃತವಾಣಿ ನಾಗರಾಜ್ ಅನ್ನೋರು ದೂರು ದಾಖಲಿಸಿದ್ರು.

ಇನ್ನು ಲೀ ಮೆರಿಡಿಯನ್ ಹೋಟೆಲ್‍ನಲ್ಲಿ ತಿಂಗಳ ಕಾಲ ವಾಸ್ತವ್ಯ ಹೂಡಿ 6 ಲಕ್ಷ ಹಣ ನೀಡದೆ ಎಸ್ಕೇಪ್ ಆಗಿದ್ದ. ಇವನ ಮಹತ್ಕಾರ್ಯದಿಂದ ಹೋಟೆಲ್‍ನ ಮೂವರು ಸಿಬ್ಬಂದಿ ಕೆಲಸ ಕಳೆದುಕೊಳ್ಳಬೇಕಾಯಿತು. ಈ ಬಗ್ಗೆ ವಿಶಾಲ್ ಚಿಪ್ಕರ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈತನ ಮರುಳು ಮಾತಿನಿಂದ ಮೋಸ ಹೋಗಿ ಹಣ ಕಳೆದುಕೊಂಡವರು ಅದೆಷ್ಟೋ ಜನ. ಈತನ ಮೇಲೆ ಗಂಗಾವತಿ, ಬನಶಂಕರಿ, ಹೈಗ್ರೌಂಡ್ಸ್, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹಲವಾರು ಕಡೆ ಪ್ರಕರಣಗಳು ದಾಖಲಾಗಿವೆ. ಸದ್ಯ ಬನಶಂಕರಿ ಪೊಲೀಸರಿಂದ ಆರೋಪಿಯನ್ನ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದಿರುವ ಗಂಗಾವತಿ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.

Write A Comment