ಬೆಂಗಳೂರು: ಈಶ್ವರಪ್ಪರನ್ನು ಹುಚ್ಚಾಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸ ಬೇಕು ಎಂದು ಪ್ರತಿಪಕ್ಷದ ಮುಖ್ಯ ಸಚೇತಕ ಆರ್.ವಿ. ವೆಂಕಟೇಶ್ ಇಂದು ವಿದಾನಪರಿಷತ್ ಸದನದ ವೇಳೆ ಲೀವಡಿ ಮಾಡಿದ್ದಾರೆ.
ವಿಧಾನಪರಿಷತ್ ನಲ್ಲಿ ಸಿಎಂ ದುಬಾರಿ ವಾಚ್ ಪ್ರಕರಕ್ಕೆ ಸಂಬಂಧಿಸಿದಂತೆ ದೊಡ್ಡ ಕೋಲಾಹಲ ಉಂಟಾಗಿತ್ತು, ಈ ಸಂದರ್ಬದಲ್ಲಿ ಬಿಜೆಪಿ ನಾಯಕ ಈಶ್ವರಪ್ಪ ಸಿಎಂ ವಾಚ್ ವಿಚಾರವಾಗಿ ಮಾತಾನಾಡಲು ಮುಂದಾದಗ ಪ್ರತಿಪಕ್ಷಗಳ ನಾಯಕರು ಅಡ್ಡಿಪಡಿಸುತ್ತಿದ್ದರು. ಇದನ್ನು ಪ್ರಶ್ನಿಸಿದ ಈಶ್ವರಪ್ಪ” ಸಭಾನಾಯಕರೇ ಇವರೆಲ್ಲಾ ಸದನಕ್ಕೆ ಕುಡಿದು ಬರುತ್ತಾರೆಯೇ” ಎಂದು ಕೇಳಿದರು.
ಇದರಿಂದ ಆಕ್ರೋಷಗೊಂಡ ಪ್ರತಿಪಕ್ಷ ಮುಖ್ಯ ಸಚೇತಕ ಆರ್.ವಿ ವೆಂಕಟೇಶ್ ಈಶ್ವರಪ್ಪರನ್ನು ಹುಚ್ಚಾಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸ ಬೇಕು ಎಂದು ಹೇಳಿದ್ದಾರೆ.