ರಾಷ್ಟ್ರೀಯ

ಮೋದಿ ಜೊತೆಗೆ ಸಚಿನ್, ಆನಂದ್ ಮನ್ ಕೀ ಬಾತ್

Pinterest LinkedIn Tumblr

modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ 17ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಜನರನ್ನು ಮಾತನಾಡಲಿದ್ದಾರೆ. ಇವತ್ತಿನ ವಿಶೇಷವೆಂದರೆ ಇಂದಿನ ಮನ್ ಕೀ ಬಾತ್‍ನಲ್ಲಿ ಇಬ್ಬರು ದಿಗ್ಗಜರು ಪ್ರಧಾನಿ ಮೋದಿಗೆ ಸಾಥ್ ನೀಡಲಿದ್ದಾರೆ.

ಹೌದು, ಕ್ರಿಕೆಟ್ ಲೋಕದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ವಿಶ್ವ ಚೆಸ್ ಚಾಂಪಿಯನ್ ಆಟಗಾರ ವಿಶ್ವನಾಥ್ ಆನಂದ್ ಮನ್ ಕೀ ಬಾತ್‍ನಲ್ಲಿ ಭಾಗಿಯಾಗಲಿದ್ದಾರೆ. ಇಂದಿನ ದಿನ ಪ್ರಧಾನಿ ಮೋದಿ ಮುಂಬರುವ ಸಿಬಿಎಸ್‍ಸಿ, ಸೇರಿದಂತೆ ಮಾರ್ಚ್ ಏಪ್ರಿಲ್‍ನಲ್ಲಿ ನಡೆಯುವ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳಿಗೆ ಟಿಪ್ಸ್ ಕೊಟ್ಟು ಧೈರ್ಯ ತುಂಬಲಿದ್ದಾರೆ.

ಈ ಹಿಂದೆ ಅಮೆರಿಕ ಅಧ್ಯಕ್ಷ ಒಬಾಮಾ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿಗೆ ಸಾಥ್ ನೀಡಿದ್ದರು. ಇದೀಗ ಸಚಿನ್ ಹಾಗೂ ಆನಂದ್ ಪಾಲ್ಗೊಳ್ಳುತ್ತಿದ್ದು, ಅವರ ಮನ್ ಕೀ ಬಾತ್ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

Write A Comment