ಕರ್ನಾಟಕ

ಚಿತ್ರದುರ್ಗದಲ್ಲಿ ಘಟನೆ: ಲಾರಿ–ಆಟೋ ನಡುವೆ ಅಪಘಾತ; ‌12 ಮಂದಿ ಸಾವು

Pinterest LinkedIn Tumblr

CHITRADURGA‌ಚಿತ್ರದುರ್ಗ: ಕಬ್ಬಿಣದ ಸರಳು ಹೇರಿಕೊಂಡು ಹೋಗುತ್ತಿದ್ದ ಲಾರಿ ಮತ್ತು ಲಗೇಜ್ ಆಟೊ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 12 ಜನರು ಮೃತಪಟ್ಟಿದ್ದಾರೆ.

ತಾಲ್ಲೂಕಿನ ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯ ಮಾಡನಾಯಕನ ಹಳ್ಳಿಯಲ್ಲಿ ಶುಕ್ರವಾರ ಬೆಳಗಿನ ಜಾವ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಅನುಚೇತ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಾಲಕ ಕುಮಾರ್ (35), ಮಂಜಣ್ಣ (61), ತಿಪ್ಪೇಸ್ವಾಮಿ (45), ಗಂಗಮ್ಮ (60), ಚೇತನ (11), ಕಲ್ಲಪ್ಪ (68), ನಾಗಣ್ಣ (45), ಗಂಗಣ್ಣ (43), ಮಂಜುನಾಥ್ (46), ಸುದೀಪ್ (17) ಹಾಗೂ ದುಗ್ಗಪ್ಪ (50) ಮೃತ ದುರ್ದೈವಿಗಳು.

ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ.

Write A Comment