ಅಂತರಾಷ್ಟ್ರೀಯ

ಪಠಾಣ್‌ಕೋಟ್‌ ದಾಳಿ: ಎಫ್‌ಐಆರ್ ದಾಖಲಿಸಿದ ಪಾಕ್

Pinterest LinkedIn Tumblr

Pathankotಇಸ್ಲಾಮಾಬಾದ್: ಪಂಜಾಬ್‌ನ ಪಠಾಣ್‌ಕೋಟ್‌ ವಾಯುನೆಲೆ ಮೇಲಿನ ಉಗ್ರರ ದಾಳಿ ಪ್ರಕರಣದ ತನಿಖೆಗೆ ಚುರುಕು ನೀಡಿರುವ ಪಾಕಿಸ್ತಾನ, ಪ್ರಕರಣ ಸಂಬಂಧ ಕೊನೆಗೂ ಎಫ್‌ಐಆರ್ ದಾಖಲಿಸಿದೆ.

ಅಧಿಕಾರಿಯೊಬ್ಬರು ಶುಕ್ರವಾರ ಈ ವಿಷಯ ತಿಳಿಸಿದ್ದಾರೆ. ಭಯೋತ್ಪಾದನಾ ದಾಳಿಯಿಂದಾಗಿ ಇಂಡೋ–ಪಾಕ್‌ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಸಭೆ ಮುಂದೂಡಿದಲಾದ ಹಲವು ವಾರಗಳ ಬಳಿಕ ಈ ಬೆಳವಣಿಗೆ ನಡೆದಿದೆ.

ಭಯೋತ್ಪಾದನಾ ತಡೆ ಇಲಾಖೆಯು(ಸಿಟಿಡಿ) ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಗುಜ್ರನವಾಲಾದಲ್ಲಿರುವ ತನ್ನ ಕೇಂದ್ರದಲ್ಲಿ ಗುರುವಾರ ಎಫ್‌ಐಆರ್‌ ದಾಖಲಿಸಿದೆ.

ದಾಳಿ ಘಟನೆ ಸಂಬಂಧ ಭಾರತದ ಒದಗಿಸಿರುವ ಸಾಕ್ಷ್ಯಗಳ ಆಧಾರದಲ್ಲಿ ಪೊಲೀಸ್ ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆಗಳನ್ನು ಆರಂಭಿಸಲು ಎಫ್‌ಐಆರ್ ಅಗತ್ಯವಾಗಿತ್ತು ಎಂದು ಸಿಟಿಡಿಯ ಆ ಅಧಿಕಾರಿ ತಿಳಿಸಿದ್ದಾರೆ.

ಎಫ್‌ಐಆರ್‌ ಸಂಖ್ಯೆ 06/2016. ಪಾಕಿಸ್ತಾನ ದಂಡ ಸಂಹಿತೆಯ 302, 324 ಹಾಗೂ 109 ಮತ್ತು ಭಯೋತ್ಪಾದನಾ ತಡೆ ಕಾಯ್ದೆಯ 7 ಹಾಗೂ 21–ಐ ಕಲಂಗಳ ಅಡಿಯಲ್ಲಿ ಪ್ರಕರಣದ ದಾಖಲಾಗಿದೆ.

ಜೈಷ್‌–ಎ–ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಉಗ್ರರ ದಾಳಿ ಹಿಂದಿನ ಪ್ರಮುಖ ಸಂಚುಕೋರ ಎಂದು ಭಾರತ ಗುರುತಿಸಿತ್ತು. ಅಲ್ಲದೇ ಈ ಕುರಿತು ದೂರವಾಣಿ ಸಂಖ್ಯೆಗಳು, ಸಂಭಾಷಣೆ ಸೇರಿದಂತೆ ಹಲವು ಪುರಾವೆಗಳನ್ನು ಪಾಕ್‌ಗೆ ಒದಗಿಸಿತ್ತು. ಜತೆಗೆ ಎಲ್ಲಾ ಬಗೆಯ ಒತ್ತಡವನ್ನೂ ಭಾರತ ಹೇರಿತ್ತು.

ಜನವರಿ 2ರಂದು ವಾಯುನೆಲೆ ಮೇಲಿನ ದಾಳಿ ಘಟನೆಯಲ್ಲಿ ಆರು ಉಗ್ರರು ಹಾಗೂ ಏಳು ಯೋಧರು ಮೃತಪಟ್ಟಿದ್ದರು.

Write A Comment