
ಹಾವೇರಿ,ಫೆ.18: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್(ಎಸ್.ಎಸ್.ಎಫ್) ರಾಜ್ಯಾದ್ಯಂತ ಹಮ್ಮಿಕೊಂಡ ಭಯೋತ್ಪಾದನೆ ವಿರುದ್ಧ ಜಿಹಾದ್ ಇದರ ಹಾವೇರಿ ಜಿಲ್ಲಾ ಮಟ್ಟದ ಜನಾಂದೋಲನ ಕಾರ್ಯಕ್ರಮಕ್ಕೆ ಸವಣೂರಿನಲ್ಲಿರುವ ಮುನುಸುನ್ನ ಆಡಿಟೋರಿಯಂನಲ್ಲಿ ಇತ್ತೀಚೆಗೆ ಹುತಾತ್ಮರಾದ ಯೋಧ ಹನುಮಂತಪ್ಪ ಕೊಪ್ಪದ್ ಅವರ ಹೆಸರಿನಲ್ಲಿ ಮಾಡಿದ ವೇದಿಕೆಯಲ್ಲಿ ಚಾಲನೆ ನೀಡಲಾಯಿತು.
ಉದ್ಘಾಟನಾ ಸೆಮಾರಂಭದ ಉದ್ಘಾಟಕರಾಗಿ ಆಗಮಿಸಿದ ಶ್ರೀ ಶ್ರೀ ಚನ್ನಬಸವ ಮಹಾಸ್ವಾಮಿ, ದೊಡ್ಡ ಹುಣಸೇ ಕಲ್ಮಠ, ಸವಣೂರು, ಇವರು ಮಾತನಾಡಿ ಭಯೋತ್ಪಾದನೆ ದೇಶದ ಶತ್ರುವಾಗಿದ್ದು ಇದರ ವಿರುದ್ಧ ಜಿಹಾದ್ ಸಾರಿದ ಎಸ್.ಎಸ್.ಎಫ್ ನ ಹೋರಾಟವನ್ನು ಶ್ಲಾಘಿಸಿದರು.
ಭಯೋತ್ಪಾದನೆ ಎಂಬ ಪೈಶಾಚಿಕ ಕೃತ್ಯವನ್ನು ಇಸ್ಲಾಮ್ ಖಂಡಿಸುತ್ತಿರುವುದನ್ನು ಜಗತ್ತಿನ ಹೆಚ್ಚು ಅನಾವರಣ ಮಾಡಬೇಕೆಂದರು. ಹಾವೇರಿ ಜಿಲ್ಲಾಧ್ಯಕ್ಷ ಇಕ್ಬಾಲ್ ರಾಣಿ ಬೆನ್ನೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಉತ್ತರ ಕರ್ನಾಟಕ ಮಾನವ ಹಕ್ಕು ಸಮಿತಿ ಇದರ ಅಧ್ಯಕ್ಷ ರಮಾಕಾಂತ್ ಶೇಂಡಿಗೆ, ಹಾವೇರಿ ಜಿಲ್ಲಾ ಎಸ್.ಎಸ್.ಎಫ್ ಪ್ರಧಾನ ಕಾರ್ಯದರ್ಶಿ ಕೆ.ಎಂ ಮುಸ್ತಫಾ ನಯಮಿ, ಹಿಮಮಿ, ಇಹ್ಸಾನ್ ಸಂಚಾಲಕ ಹುಸೈನ್ ಸಅದಿ ಹೊಸ್ಮಾರ್, ಯಾಸೀನ್ ಸಖಾಫಿ ರಾಣಿಬೆನ್ನೂರು ಮಾತನಾಡಿದರು.