ರಾಷ್ಟ್ರೀಯ

ಪೆಟ್ರೋಲ್ ಬೆಲೆ 32 ಪೈಸೆ ಇಳಿಕೆ, ಡೀಸೆಲ್ ಬೆಲೆ 28 ಪೈಸೆ ಏರಿಕೆ

Pinterest LinkedIn Tumblr

petrol30ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಬುಧವಾರ ದರ ಪರಿಷ್ಕೃತಗೊಂಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ದರ 32 ಪೈಸೆ ಇಳಿಕೆಯಾಗಿದ್ದರೆ ಡೀಸೆಲ್ ದರ 28 ಪೈಸೆ ಏರಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿದಿರುವ ಪರಿಣಾಮ ಭಾರತದಲ್ಲೂ ಪೆಟ್ರೋಲ್ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಭಾರತೀಯ ತೈಲ ಕಂಪನಿಗಳು ತಿಳಿಸಿವೆ.

ಪರಿಷ್ಕೃತ ದರದ ಪ್ರಕಾರ ಪ್ರತಿ ಲೀಟರ್ ಪೆಟ್ರೋಲ್ ದರ 59.63 ರುಪಾಯಿಯಾಗಲಿದ್ದು, ಲೀಟರ್ ಡೀಸೆಲ್ ಗೆ 44.96 ರುಪಾಯಿಯಾಗಲಿದೆ.

ಮಾರುಕಟ್ಟೆ ದರದ ಆಧಾರದಲ್ಲಿ ಪ್ರತಿ 15 ದಿನಗಳಿಗೊಮ್ಮೆ ಪೆಟ್ರೋಲ್, ಡಿಸೇಲ್ ದರವನ್ನು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಶನ್, ಭಾರತ ಪೆಟ್ರೋಲಿಯಮ್ ಹಿಂದೂಸ್ಥಾನ್‌ ಪೆಟ್ರೋಲಿಯಂ (ಎಚ್‌ಪಿಸಿಎಲ್‌) ಸೇರಿದಂತೆ ಸರ್ಕಾರಿ ಸ್ವಾಮ್ಯದ ಕಂಪನಿಗಳು ಪರಿಷ್ಕರಣೆ ಮಾಡುತ್ತವೆ.

Write A Comment