ಸ್ಯಾಂಡಲ್ ವುಡ್’ನಲ್ಲಿ ಹೊಸ ಅಲೆಯೆಬ್ಬಿಸಿ ಯಶಸ್ಸು ಕಂಡಿದ್ದ ‘ರಥಾವರ’ ಚಿತ್ರದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸಲಿರುವ ಹೊಸ ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ನಾಯಕರಾಗಲಿದ್ದಾರೆ ಎಂಬ ಮಾತುಗಳು ಗಾಂಧಿನಗರದಿಂದ ಕೇಳಿ ಬರುತ್ತಿದೆ.
ರಥಾವರದ ಯಶಸ್ಸಿನ ಬೆನ್ನಲ್ಲೇ ಹೊಸ ಚಿತ್ರ ನಿರ್ಮಿಸಲು ನಿರ್ದೇಶಕ/ನಿರ್ಮಾಪಕ ಆರ್.ಚಂದ್ರು(ತಾಜ್ ಮಹಲ್,ಮೈಲಾರಿ) ಮುಂದಾಗಿರುವ ಸುದ್ದಿ ಗೊತ್ತೇ ಇದೆ.
ಸದ್ಯ ಕಾಂಗ್ರೆಸ್ ನಾಯಕ ರೇವಣ್ಣ ಪುತ್ರ ಅಭಿನಯದ ‘ಲಕ್ಷ್ಮಣ’ ಚಿತ್ರವನ್ನು ನಿರ್ದೇಶಿಸಿರುವ ಆರ್.ಚಂದ್ರು ತಮ್ಮ ನಿರ್ಮಾಣದ ಮುಂದಿನ ಚಿತ್ರಕ್ಕೂ ಅನೂಪ್’ರನ್ನು ನಾಯಕನಾಗಿಸಲು ಇಚ್ಛಿಸಿದ್ದಾರಂತೆ.
ಆದರೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಯಶ್’ರಂತಹ ಟಾಪ್ ಸ್ಟಾರ್ ವ್ಯಾಲ್ಯೂ ನಟನನ್ನು ತಮ್ಮ ಚಿತ್ರಕ್ಕೆ ನಾಯಕನಾಗಿಸುವ ಇರಾದೆ ಹೊಂದಿದ್ದಾರೆಂಬ ಸುದ್ದಿ ಕೇಳಿ ಬರುತ್ತಿದೆ.
ಏನೇಯಾದರೂ ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಹಳೆಯ ಗೆಳೆಯರಾದ ಚಂದ್ರಶೇಖರ್(ರಥಾವರ) ಮತ್ತು ಚಂದ್ರು(ತಾಜ್ ಮಹಲ್) ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಜೊತೆಯಾಗುದಂತು ಪಕ್ಕಾ ಆಗಿದ್ದು ಆದರೆ ಚಿತ್ರದ ನಾಯಕ ಯಾರಾಗಲಿದ್ದಾರೆ ಎಂಬುದು ಮಾತ್ರ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
★ಕಪ್ಪು ಮೂಗುತ್ತಿ
-ಉದಯವಾಣಿ