ರಾಷ್ಟ್ರೀಯ

ಕೋರ್ಟ್ ಆವರಣದಲ್ಲಿ ವಕೀಲರ ದಾಳಿ ಖಂಡಿಸಿ ಪತ್ರಕರ್ತರ ಪ್ರತಿಭಟನೆ

Pinterest LinkedIn Tumblr

JNU-VVನವದೆಹಲಿ: ಜೆಎನ್​ಯುು ಗಲಾಟೆ ಸಂಬಂಧಿಸಿದಂತೆ ಪಟಿಯಾಲಾ ಕೋರ್ಟ್ ಆವರಣದಲ್ಲಿ ವಕೀಲರು ನಡೆಸಿದ ದಾಳಿ ಖಂಡಿಸಿ ದೆಹಲಿ ಪತ್ರಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸಂಸತ್ ಭವನ ಸಮೀಪ ಇರುವ ಪ್ರೆಸ್ ಕ್ಲಬ್​ನಿಂದ ಆರಂಭವಾದ ಪ್ರತಿಭಟನೆ ಸುಪ್ರೀಂಕೋರ್ಟ್​ವರೆಗೂ ಸಾಗಿತು. ಕೋರ್ಟ್ ಆವರಣದಲ್ಲಿ ದಾಳಿ ನಡೆಸಿದ ವಕೀಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪತ್ರಕರ್ತರು ಆಗ್ರಹಿಸಿದರು. ಪ್ರತಿಭಟನೆಗೆ ಜವಾಹರ್​ಲಾಲ್ ನೆಹರು ವಿವಿಯ ವಿದ್ಯಾರ್ಥಿಗಳು ಕೂಡ ಬೆಂಬಲ ನೀಡಿದರು.

ಸೋಮವಾರ ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್​ನನ್ನು ವಿಚಾರಣೆಗೆ ಹಾಜರುಪಡಿಸುವ ಸಂದರ್ಭದಲ್ಲಿ ವಕೀಲರು, ವಿದ್ಯಾರ್ಥಿಗಳು ಹಾಗೂ ಪತ್ರಕರ್ತರ ಮಧ್ಯೆ ಗಲಾಟೆ ಆಗಿತ್ತು. ವಕೀಲರು ಈ ಸಂದರ್ಭದಲ್ಲಿ ಪತ್ರಕರ್ತರು ಹಾಗೂ ವಿದ್ಯಾರ್ಥಿಗಳನ್ನು ಥಳಿಸಿದ್ದರು.

Write A Comment