ರಾಷ್ಟ್ರೀಯ

ವೇದ ಉಪನಿಷತ್ತಿನಲ್ಲಿರದ ಪಕ್ಷಪಾತ ಶಬರಿಮಲೆಯಲ್ಲೇಕೆ? ಸುಪ್ರೀಂ ಪ್ರಶ್ನೆ

Pinterest LinkedIn Tumblr

suprim-webನವದೆಹಲಿ: ಹಿಂದುಗಳ ಪವಿತ್ರ ಗಂಥಗಳಾದ ವೇದ, ಉಪನಿಷತ್ತುಗಳೇ ಪಕ್ಷಪಾತ ಮಾಡದಿರುವಾಗ ಶಬರಿಮಲೆಯಲ್ಲಿ ಏಕೆ ಮಹಿಳೆ, ಪುರುಷ ಎಂದು ಭೇದ-ಭಾವ ಮಾಡಲಾಗುತ್ತಿದೆೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಕೇರಳ ಸರ್ಕಾರ ಹಾಗೂ ದೇವಾಲಯ ಆಡಳಿತವನ್ನು ಪ್ರಶ್ನಿಸಿದೆ.

ಮಹಿಳೆಯರ ದೇವಾಲಯ ಪ್ರವೇಶ ಕುರಿತ ಪ್ರಕರಣದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಭಾರತದಲ್ಲಿ ಇಲ್ಲಿಯವರೆಗೆ ಯಾವುದೇ ಧರ್ಮ ಗ್ರಂಥಗಳು ಮಹಿಳೆಯರ ಬಗ್ಗೆ ತಾರತಮ್ಯ ಮಾಡಿಲ್ಲ. ಇದು ಚಾರಿತ್ರಿಕವಾಗಿ ಕಾಲಕ್ರಮದಲ್ಲಿ ಬೆಳೆದ ವಿದ್ಯಮಾನ ಎಂದು ಹೇಳಿತು.

ಶಬರಿಮಲೆಯಲ್ಲಿ 10 ರಿಂದ 50 ವರ್ಷದ ಮಹಿಳೆಯರಿಗೆ ಪ್ರವೇಶ ನಿಷೇಧ ಹೇರಲಾಗಿರುವ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.

ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಸಮಾನತೆ ಹಾಗೂ ಧಾರ್ವಿುಕ ಹಕ್ಕುಗಳ ವ್ಯಾಪ್ತಿಯಲ್ಲಿ ಈ ಪ್ರಕರಣವನ್ನು ನ್ಯಾಯಾಲಯ ಪರಿಶೀಲಿಸಬೇಕಾಗಿದೆ. ಆದ್ದರಿಂದ ಧಾರ್ವಿುಕ ವಿಧಿವಿಧಾನದಲ್ಲಿ ಮಹಿಳೆಯರ ಬಗ್ಗೆ ತಾರತಮ್ಯ ಎಂದಿನಿಂದ ಪ್ರಾರಂಭವಾಯಿತು. ಅದಕ್ಕೆ ಕಾರಣಗಳೇನು ಎಂಬುದಾಗಿ ಆರುವಾರದೊಳಗೆ ತಿಳಿಸುವಂತೆ ನ್ಯಾಯಾಲಯ ದೇವಾಲಯದ ಆಡಳಿತ ಮಂಡಳಿಗೆ ನಿರ್ದೇಶನ ನೀಡಿತು.

ದೇವಾಲಯ ಆಡಳಿತ ಮಂಡಳಿ ಪರ ವಾದ ಮಂಡಿಸಿದ ವಕೀಲ ಕೆ.ಕೆ ವೇಣುಗೋಪಾಲ್ ತಮ್ಮ ವಾದ ಮಂಡಿಸಿ, ಕಳೆದ ಒಂದು ಸಾವಿರ ವರ್ಷಗಳಿಂದ ಈ ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು, ಈಗ ಏಕೆ ಅದನ್ನು ಅಗೆಯಲಾಗುತ್ತಿದೆ? ದೇವಾಲಯದ ಪವಿತ್ರತೆಯ ದೃಷ್ಟಿಯಿಂದ ಮಹಿಳಾ ನಿಷೇಧ ಜಾರಿಗೆ ಬಂದಿದೆ ಎಂದು ತಿಳಿಸಿದರು.

Write A Comment