ರಾಷ್ಟ್ರೀಯ

ಭಾರತೀಯ ಸೇನೆಯಿಂದ ವೀರಯೋಧ ಹನುಮಂತಪ್ಪಗೆ ಅಂತಿಮ ನಮನ

Pinterest LinkedIn Tumblr

koppad-11ನವದೆಹಲಿ: ಹುತಾತ್ಮ ವೀರಯೋಧ ಲ್ಯಾನ್ಸ್‌ನಾಯಕ್‌ ಹನುಮಂತಪ್ಪ ಕೊಪ್ಪದ್ ಅವರಿಗೆ ಗುರುವಾರ ಭಾರತೀಯ ಸೇನೆ ಅಂತಿಮ ನಮನ ಸಲ್ಲಿಸಿತು.

ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್‌ ನಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ ಸಿಲುಕಿ, ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದ ಧಾರವಾಡ ಜಿಲ್ಲೆಯ ಕುಂದಗೊಳ ತಾಲೂಕಿನ ಬೆಟದೂರಿನ ಯೋಧ ಹನುಮಂತಪ್ಪ ಕೊಪ್ಪದ್ ಅವರು ಇಂದು ಆರ್ ಆರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಇಂದು ಮಧ್ಯಾಹ್ನ 3.30ರ ಸುಮಾರಿಗೆ ಯೋಧನ ಮೃತದೇಹವನ್ನು ಆರ್ಆರ್ ಆಸ್ಪತ್ರೆಯಿಂದ ದೆಹಲಿಯ ಕಂಟೊನ್ಮೆಂಟ್ ಪ್ರದೇಶದ ಪರೇಡ್ ಮೈದಾನದಲ್ಲಿ ವೀರಪುತ್ರನಿಗೆ ಸೇನಾಪಡೆಗಳು ಗೌರವ ಸಲ್ಲಿಸಿದವು.

ಇದೇ ವೇಳೆ ರಕ್ಷಣಾ ಸಚಿವ ಮನೋಹರ್ ಪರ್ರಿಕರ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಹ ಹುತಾತ್ಮ ಯೋಧನಿಗೆ ಅಂತಿನ ನಮನ ಸಲ್ಲಿಸಿದರು.

ಭಾರತೀಯ ಸೇನೆಯ ಅಂತಿಮ ನಮನದ ಬಳಿಕ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪಾರ್ಥಿವ ಶರೀರವನ್ನು ಕರ್ನಾಟಕ್ಕೆ ರವಾನಿಸಲಾಗುತ್ತದೆ.

Write A Comment