ಗಲ್ಫ್

ಫೆಬ್ರವರಿ 12 ರಂದು ದುಬೈ ಗಮ್ಮತ್ ಕಲಾವಿದೆರಿಂದ “ನಂಕ್ ಮಾತೆರ್ಲ ಬೋಡು” ತುಳು ನಾಟಕ ಪ್ರದರ್ಶನ

Pinterest LinkedIn Tumblr

gk invi 2016i

ದುಬೈ, ಫೆ.೯: ದುಬೈಯ ಗಮ್ಮತ್ ಕಲಾವಿದೆರ್ ತಂಡದ ಐದನೇ ವರ್ಷದ ಕಾಣಿಕೆಯಾಗಿ ಫೆಬ್ರವರಿ 12 ರಂದು ಸಂಜೆ 5.30 ಕ್ಕೆ ದುಬಾಯಿಯ ಜುಮೇರಾದಲ್ಲಿರುವ ಎಮಿರೇಟ್ಸ್ ಇಂಟರ್ ನ್ಯಾಶನಲ್ ಸ್ಕೂಲ್ ನ ಎಮಿರೇಟ್ಸ್ ಥಿಯೇಟರ್ ನಲ್ಲಿ “ನಂಕ್ ಮಾತೆರ್ಲ ಬೋಡು” ಎಂಬ ತುಳು ಸಾಂಸರಿಕ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

ಸೇವಾ ಭಾವ ಚಾರಿಟೇಬಲ್ ಟ್ರಸ್ಟ್(ರಿ) ಇದರ ಸಹಾಯಾರ್ಥವಾಗಿ ಪ್ರದರ್ಶನಗೊಳ್ಳಲಿರುವ ಈ ನಾಟಕವನ್ನು ಕಿಶೋರ್.ಡಿ.ಶೆಟ್ಟಿ ಸಾರಥ್ಯದ ಲಕುಮಿ ತಂಡ ಮಂಗಳೂರು ಇದರ ಕಲಾವಿದ ನವೀನ್ ಶೆಟ್ಟಿ ಅಳಕೆ ರಚಿಸಿ,ವಿಶ್ವನಾಥ ಶೆಟ್ಟಿ ದುಬೈ ನಿರ್ದೇಶಿಸಿದ್ದಾರೆ. ಸಂಗೀತವನ್ನು ರಾಜೇಶ್ ಭಟ್ ನೀಡಿದ್ದಾರೆ. ತಾವೆಲ್ಲರೂ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ತಿಳಿಸಿದ್ದಾರೆ.

locationmap-jumeirah

ಟಿಕೆಟ್ ಹಾಗು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.

ಸಂತೋಷ್ ಪೂಜಾರಿ-050 4733480
ನಿತಿನ್ ಉಡುಪಿ-050 7120501
ವಿವೇಕ್ ಆನಂದ್-050 7379303
ಕಿರಣ್ ಶೆಟ್ಟಿ-050 3847266

Write A Comment