
ಮಂಗಳೂರು,ಫೆ.05 : ನಗರದ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿಯರಿಬ್ಬರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಸ್ಟಾರ್ ಕಾಲೇಜಿನ ವಿದ್ಯಾರ್ಥಿ ವಶಕ್ಕೆ ಪಡೆದಿಕೊಂಡು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆಗೊಳಗಾದ ವಿಧ್ಯಾರ್ಥಿಯನ್ನು ಬೆಂಗ್ರೆ ನಿವಾಸಿ ಅಹ್ಮದ್ ನಿಸಾರ್ 17) ಎಂದು ಗಿರುತಿಸಲಾಗಿದ್ದು, ನಾಪತ್ತೆಯಾದ ಸಂತ ಅಲೋಶಿಯಸ್ ಕಾಲೇಜಿನ ವಿಧ್ಯಾರ್ಥಿನಿಯೊಂದಿಗೆ ಈತ ಫೆ.1 ರಂದು ಸಾಮಾಜಿಕ ಜಾಲತಾಣಗಳಲ್ಲಿ ಚಾಟ್ ಮಾಡಿದ್ದಾನೆಂಬ ಆರೋಪದ ಮೇಲೆ ಬಂಧಿಸಿರುವ ಬಂದರು ಪೊಲೀಸರು ಇದೀಗ ಈತನನ್ನು ಸಿಸಿಬಿ ಪೊಲಿಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.