ಕರ್ನಾಟಕ

ಕೆಎಸ್‌ಆರ್‌ಟಿಸಿ ಬಸ್ಸಿಗೆ ಟಿವಿಎಸ್ ಡಿಕ್ಕಿ : ಸವಾರ ಸಾವು

Pinterest LinkedIn Tumblr

ksra

ತುಮಕೂರು, ಫೆ.4: ಅತಿ ವೇಗವಾಗಿ ಮುನ್ನುಗ್ಗಿದ ಟಿವಿಎಸ್ ಎಕ್ಸೆಲ್ ವಾಹನ ಮುಂದೆ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಅಪ್ಪಳಿಸಿದ ಪರಿಣಾಮ ಸವಾರ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟನಾಯ್ಕನಹಳ್ಳಿ ಬಳಿಯ ನಿವಾಸಿ ಪ್ರಕಾಶ್ (45) ಮೃತಪಟ್ಟ ದುರ್ದೈವಿ. ಇಂದು ಬೆಳಗ್ಗೆ 6.30ರಲ್ಲಿ ಶಿರಾ ಕಡೆಯಿಂದ ತುಮಕೂರು ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ಚಲಿಸುತ್ತಿತ್ತು. ಪ್ರಕಾಶ್ ತಮ್ಮ ಟಿವಿಎಸ್ ಎಕ್ಸೆಲ್ ವಾಹನದಲ್ಲಿ ಹೋಗುತ್ತಿದ್ದಾಗ ಕಾಮತ್ ಹೊಟೇಲ್ ಬಳಿ ಬಸ್‌ನ ಚಾಲನೆ ನಿಧಾನವಾದಾಗ ಹಿಂದಿನಿಂದ ಅತಿ ವೇಗವಾಗಿ ಬಂದ ಪ್ರಕಾಶ್ ಅವರ ಟಿವಿಎಸ್ ವಾಹನ ಬಸ್‌ಗೆ ಅಪ್ಪಳಿಸಿದೆ.

ಅಪ್ಪಳಿಸಿದ ರಭಸಕ್ಕೆ ಟಿವಿಎಸ್ ವಾಹನ ಒಂದು ಕಡೆ ಬಿದ್ದರೆ ಪ್ರಕಾಶ್ ಬಸ್‌ನ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಕಳ್ಳಂಬೆಳ್ಳ ಠಾಣೆ ಸಬ್‌ಇನ್ಸ್‌ಪೆಕ್ಟರ್ ಚಂದ್ರಶೇಖರ್ ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶಿರಾ ಗ್ರಾಮಾಂತರ ವೃತ್ತನಿರೀಕ್ಷಕ ರಾಮಕೃಷ್ಣ ಸಹ ಭೇಟಿ ನೀಡಿದ್ದರು.

Write A Comment