ರಾಷ್ಟ್ರೀಯ

ಮಹಿಳೆಯರು ಮನೆಯಲ್ಲಿ ಪೂಜೆ ಮಾಡಿದರೆ ಸಾಕು: ಮಧ್ಯಪ್ರದೇಶ ಸಚಿವ ಬಾಬುಲಾಲ್

Pinterest LinkedIn Tumblr

babulalಭೋಪಾಲ್: ಮಹಾರಾಷ್ಟ್ರದ ಶನಿ ಶಿಂಗ್ಣಾಪುರ ದೇವಾಲಯದ ಗರ್ಭಗುಡಿ ಪ್ರವೇಶಿಸುವ ವಿಷಯಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಹಾಗೂ ದೇವಾಲಯದ ಆಡಳಿತ ಮಂಡಳಿ ನಡುವೆ ಬಿಕ್ಕಟ್ಟು ಮುಂದುವರೆದಿರುವ ವೇಳೆಯಲ್ಲೇ ಮಧ್ಯಪ್ರದೇಶದ ಗೃಹ ಸಚಿವ ಬಾಬುಲಾಲ್ ಗೌರ್ ವಿವಾದಕ್ಕೀಡಾಗುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ.

ದೇವಾಲಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನಿಗೆ ಪ್ರತಿಕ್ರಿಯಿಸಿರುವ ಬಾಬುಲಾಲ್, ” ಆ ವಿಷಯವನ್ನು ಬಿಟ್ಟುಬಿಡಿ, ಮಹಿಳೆಯರು ಮನೆಯಲ್ಲಿ ಪೂಜೆ ಮಾಡಿದರೆ ಸಾಕು ಎಂದು ಹೇಳಿದ್ದಾರೆ.

ಮಹಿಳೆಯರು ದೇವಾಲಯ ಪ್ರವೇಶಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲೇ ಮಧ್ಯಪ್ರದೇಶದ ಸಚಿವರು ಮಹಿಳೆಯರು ಮನೆಯಲ್ಲಿ ಪೂಜೆ ಮಾಡಿದರೆ ಸಾಕಾಗುತ್ತದೆ ಎಂದು ಹೇಳಿಕೆ ನೀಡಿರುವುದು ಮಹಿಳಾ ಪ್ರತಿಭಟನಾಕಾರರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ.

Write A Comment