ನವದೆಹಲಿ: ಝಿಕಾ ವೈರಸ್ ಭಾರತಕ್ಕೆ ಬರುವ ಸಾಧ್ಯತೆಯನ್ನು ತಡೆಗಟ್ಟಲು ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಆರೋಗ್ಯ ಸಚಿವರಾದ ಜೆಪಿ ನಡ್ಡಾ ಅವರು ಶುಕ್ರವಾರ ಆರೋಗ್ಯಾಧಿಕಾರಿಗಳು ಹಾಗೂ ಏಮ್್ಸ ಜತೆಗೆ ಶುಕ್ರವಾರ ಉನ್ನತ ಮಟ್ಟದ ತುರ್ತಸಭೆ ನಡೆಸಿದರು.
ಈಗಾಗಲೇ ಲ್ಯಾಟಿನ್ ಅಮೇರಿಕದಲ್ಲಿ 14 ಲಕ್ಷ ಝಿಕಾ ವೈರಾಣು ಪ್ರಕರಣ ಕಾಣಿಸಿಕೊಂಡಿದೆ. ಆದ್ದರಿಂದ ಗುರುವಾರ ವಿಶ್ವ ಆರೋಗ್ಯ ಸಂಸ್ಥೆ ಸಭೆ ನಡೆಸಿ, ಮುಂದಿನ ದಿನಗಳಲ್ಲಿ ಈ ವೈರಾಣು ಹರಡುವಿಕೆ ಕಂಡುಬಂದಲ್ಲಿ ಅಂತಾರಾಷ್ಟ್ರೀಯ ತುರ್ತು ಆರೋಗ್ಯಕ್ರಮ ಘೊಷಿಸಲಾಗುವುದು ಎಂದು ತಿಳಿಸಿದೆ.
ಆಫ್ರಿಕಾ, ಬ್ರೆಜಿಲ್, ಅಮೇರಿಕಾದಲ್ಲಿ ಝಿಕಾ ಸೊಂಕು ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಉಳಿದ ದೇಶಗಳಿಗೆ ಹರಡುವ ಸಾಧ್ಯತೆ ಇದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.