ನವದೆಹಲಿ: ರೈಲ್ವೆ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತಿರುವ ರೈಲ್ವೆ ಇಲಾಖೆ ಈಗ ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಲು ಮಿತಿಯನ್ನು ಹೇರಿದೆ.
ಒಂದು ಅಕೌಂಟ್ನಿಂದ ತಿಂಗಳೊಂದಕ್ಕೆ ಕೇವಲ 6 ಟಿಕೆಟ್ಗಳನ್ನು ಮಾತ್ರ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಶೇ. 10ರಷ್ಟು ಅಕೌಂಟ್ಗಳಿಂದ ತಿಂಗಳಿಗೆ 10ಕ್ಕಿಂತ ಹೆಚ್ಚಿನ ಟಿಕೆಟ್ಗಳು ಬುಕ್ ಆಗುತ್ತಿದ್ದವು. ಇದರಿಂದ ಅರ್ಹ ಪ್ರಯಾಣಿಕರಿಗೆ ಟಿಕೆಟ್ ಲಭ್ಯವಾಗುತ್ತಿರಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಟಿಕೆಟ್ ಬುಕ್ಕಿಂಗ್ ಮೇಲೆ ಮಿತಿ ಹೇರಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ವ್ಯವಸ್ಥೆಯಿಂದ ರೈಲಿನಲ್ಲಿ ಆಗಾಗ್ಗೆ ಪ್ರಯಾಣಿಸುವವರಿಗೆ ಕಷ್ಟವಾಗಲಿದೆ. ಜತೆಗೆ ಟಿಕೆಟ್ ಬುಕ್ಕಿಂಗ್ ಏಜೆಂಟ್ಗಳು ಒಂದಕ್ಕಿಂತ ಹೆಚ್ಚು ಅಕೌಂಟ್ ಮಾಡಿ ಟಿಕೆಟ್ ಬುಕ್ ಮಾಡಬಹುದು ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.