
ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : ಜ. 26ರಂದು ಸಂಜೆ ಮಾಟುಂಗಾದ ವಿಶ್ವೇಶ್ವರಯ್ಯ ಸಭಾಗೃಹ ದಲ್ಲಿ ಪತ್ರಕರ್ತ ಲ. ಶರತ್ ಶೆಟ್ಟಿ ನೇತೃತ್ವದ ಕಿನ್ನಿಗೋಳಿಯ ವಿಜಯಾ ಕಲಾವಿದರಿಂದ ಹರೀಶ್ ಪಡುಬಿದ್ರೆಯವರ ಜಗದೀಶ್ ಶೆಟ್ಟಿ ಕೆಂಚನಕೆರೆ ನಿರ್ದೇಶನದ ಹಾಸ್ಯಮಯ ನಾಟಕ “ಲೆಕ್ಕ ತತ್ತಿ ಬೊಕ್ಕ .. ವನ್ನು ಪ್ರದರ್ಶಿಸಲಾಯಿತು.
ಸತ್ಯನ್ ಶೆಟ್ಟಿ ಏಳಿಂಜೆಯವರ ವ್ಯವಸ್ಥಾಪಕತ್ವದಲ್ಲಿ ಪ್ರದರ್ಶನಗೊಂಡ ನಾಟಕದ ಆರಂಭದಲ್ಲಿ ನಡೆದ ಸಭಾಕಾರ್ಯಕ್ರಮದ ಉದ್ಯಮಿ ಅನಿಲ್ ಶೆಟ್ಟಿ ಏಳಿಂಜೆ ಅವರು ನಾಟಕದ ಕಲಾವಿದರನ್ನು ಸನ್ಮಾನಿಸುತ್ತಾ ಗ್ರಾಮೀಣ ಕಲಾವಿದರಿಗೆ ಶರತ್ ಶೆಟ್ಟಿಯವರು ಸೂಕ್ತ ವೇದಿಕೆ ನಿರ್ಮಿಸಿರುವರು. ನಾಟಕಗಳ ಮೂಲಕ ಬಾಷೆ, ಸಂಸ್ಕೃತಿಯು ಬೆಳೆಯುತ್ತಿದೆ ಎಂದರು.

ವೇದಿಕೆಯಲ್ಲಿ ಏಳಿಂಜೆ ನಂದನ ಮನೆ ಸಂಜೀವ ಶೆಟ್ಟಿ, ಉದ್ಯಮಿ ಮೋಹನ್ ಸಾಲ್ಯಾನ್, ಸದಾಶಿವ ಪೂಜಾರಿ, ಪ್ರಕಾಶ್ ಶೆಟ್ಟಿ ಪಂಜದ ಗುತ್ತು, ತಂಡದ ಮುಂಬಯಿ ಸಂಚಾಲಕ ಪ್ರಕಾಶ್ ಶೆಟ್ಟಿ, ಸುರತ್ಕಲ್ ಮೊದಲಾದವರು ಉಪಸ್ಥಿತರಿದ್ದರು.
ನಾಟಕದ ಕಲಾವಿದರಾದ ಸುಧಾಕರ ಸಾಲಿಯಾನ್, ಸೀತಾರಾಮ ಶೆಟ್ಟಿ, ರೇಖಾ ಕೆಂಚನಕೆರೆ ಇವರನ್ನು ಸನ್ಮಾನಿಸಲಾಯಿತು.