ಕರಾವಳಿ

ದೇವಾಡಿಗ ಯುವ ಸಂಘಟನೆ ವಾಟ್ಸ್ ಆ್ಯಪ್ ಗ್ರೂಪ್ “ಯಂಗಿಸ್ತಾನ್”ನ ಪ್ರಥಮ ವಾರ್ಷಿಕೋತ್ಸವ ಆಚರಣೆ

Pinterest LinkedIn Tumblr

yangistaan Mang_Jan 27-2016-007

ದೇವಾಡಿಗ ಯುವ ಸಂಘಟನೆ ಮಂಗಳೂರು ಇದರ ವಾಟ್ಸ್ ಆ್ಯಪ್ ಗ್ರೂಪ್ “ಯಂಗಿಸ್ತಾನ್” ಇದರ ಪ್ರಥಮ ವರ್ಷದ ವಾರ್ಷಿಕೋತ್ಸವ ವನ್ನು ಮಂಗಳೂರಿನ ಕೊಡಿಯಾಲಬೈಲ್ ಇಲ್ಲಿನ “ವಾತ್ಸಲ್ಯಧಾಮ”ದಲ್ಲಿ ತಾ:- 26/1/2016 ಮಂಗಳವಾರ ಆಚರಿಸಲಾಯಿತು.

ಸಮಾರಂಭದಲ್ಲಿ ಸಭಾಧ್ಯಕ್ಷ ಸ್ಥಾನವನ್ನು ಕರ್ನಾಟಕ ರಾಜ್ಯ ದೇವಾಡಿಗ ಸಂಘ ಮಂಗಳೂರು ಇದರ ಅಧ್ಯಕ್ಷರಾದ ಶ್ರೀಯತ ವಾಮನ್ ಮರೋಳಿ ಅಲಂಕರಿಸಿದರು. ಅತಿಥಿಗಳಾಗಿ ಸಮಾಜ ಸೇವಕರಾದ ಶ್ರೀ ಕರುಣಾಕರ್ M H, ದೇವಾಡಿಗ ಮಹಿಳಾ ಸಂಘಟನೆ ಅಧ್ಯಕ್ಷರಾದ ಶ್ರೀಮತಿ ಗೀತ ಕಲ್ಯಾಣ್ ಪುರ, ವಿನಾಯಕ ಗಾರ್ಮೆಂಟ್ಸ್ ಇದರ ಮಾಲಕರಾದ ಶ್ರೀಮತಿ ಕಸುಮ ದೇವಾಡಿಗ, ದೇವಾಡಿಗ ಯುವ ಸಂಘಟನೆ ಮಂಗಳೂರು ಇದರ ಅಧ್ಯಕ್ಷರಾದ ಅರುಣ್ ಪ್ರಶಾಂತ್ MH, ಗ್ರೂಪ್ ಅಡ್ಮಿನ್ ಶೈಲೇಶ್ ದೇವಾಡಿಗ ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ “ವಾತ್ಸಲ್ಯಧಾಮ” ಹಿರಿಯ ನಿವಾಸಿ ಮಹಾಬಲ ಸುವರ್ಣ ಇವರನ್ನು ಗೌರವಿಸಲಾಯಿತು.

yangistaan Mang_Jan 27-2016-001

yangistaan Mang_Jan 27-2016-002

yangistaan Mang_Jan 27-2016-003

yangistaan Mang_Jan 27-2016-004

yangistaan Mang_Jan 27-2016-005

yangistaan Mang_Jan 27-2016-006

yangistaan Mang_Jan 27-2016-008

yangistaan Mang_Jan 27-2016-009

yangistaan Mang_Jan 27-2016-010

yangistaan Mang_Jan 27-2016-011

ಅತಿಥಿಗಳು ಹಿತನುಡಿಗಳನ್ನು ನುಡಿದರು, ರಕ್ಷಿತ್ ದೇವಾಡಿಗ ಪಡೀಲ್ ಸ್ವಾಗತ ಭಾಷಣ ಹಾಗೂ ಸುಶ್ಮಿತ ದೇವಾಡಿಗ ಧನ್ಯವಾದ ಸಮರ್ಪಣೆ ಗೈದರು, ವಿಜೇಶ್ ದೇವಾಡಿಗ ಮಂಗಳಾದೇವಿ ಕಾರ್ಯಕ್ರಮ ನಿರೂಪಣೆ ನಡೆಸಿಕೊಟ್ಟರು.

ಸಭಾಕಾರ್ಯಕ್ರಮದ ನಂತರ ತಂಡದ ಯುವ ಪ್ರತಿಭೆ ನಿಖಿಲ್ ದೇವಾಡಿಗ ಇವರು ಸಿದ್ಧಪಡಿಸಿದ ಕಿರುಚಿತ್ರ ಪ್ರದರ್ಶನ ಹಾಗೂ ಗ್ರೂಪ್ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ನಂತರ ಆಶ್ರಮ ನಿವಾಸಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ಯಶಸ್ಸಿನ ಸಂತೋಷ ಹಂಚಿಕೂಂಡ ಗ್ರೂಪ್ ಅಡ್ಮಿನ್ ಶೈಲೇಶ್ ದೇವಾಡಿಗ ಸದಸ್ಯರೆಲ್ಲರಿಗೂ ಧನ್ಯವಾದ ಸಮರ್ಪಿಸಿದರು.

ವರದಿ:- ವಿಜೇಶ್ ದೇವಾಡಿಗ ಮಂಗಳಾದೇವಿ

Write A Comment