ಮಂಗಳೂರು, ಜ.27: ದಕ್ಷಿಣ ಕನ್ನಡ ಜಿಲ್ಲೆಯ ಈ ಸಾಲಿನ ಪ್ರತಿಷ್ಠಿತ ಕರಾವಳಿ ಗೌರವ ಪ್ರಶಸ್ತಿಗೆ ಸಮಾಜ ಸೇವಕಿ, ವೆಲೆನ್ಸಿಯಾದ ವಿಶ್ವಾಸ್ ಟ್ರಸ್ಟ್‌ನ ನಿರ್ದೇಶಕಿ ಡಾ.ಒಲಿಂಡಾ ಪಿರೇರಾ ಅವರು ಅಯ್ಕೆಯಾಗಿದ್ದು, ಮಂಗಳವಾರ ಸಂಜೆ ಕದ್ರಿ ಫಲಪುಷ್ಪ ಪ್ರದರ್ಶನದ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.
ನಿರಂತರವಾಗಿ ಸಮಾಜ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಯುವ ಸಮುದಾಯಕ್ಕೆ ಸ್ಫೂರ್ತಿ ತುಂಬುತ್ತಿರುವ 91ರ ಹರೆಯದ ಒಲಿಂಡಾ ಪಿರೇರಾ ನಿಜವಾಗಿಯೂ ಈ ಗೌರವಕ್ಕೆ ಅರ್ಹರು ಎಂದು ಸಚಿವರು ಹೇಳಿದರು.
ಹಿರಿಯ ವಿದ್ವಾಂಸ ಪ್ರೊ.ವಿವೇಕ ರೈ ಅವರನ್ನು ಒಳಗೊಂಡ ಸಮಿತಿಯು ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡಿದ ವೆಲೆನ್ಸಿಯಾದ ವಿಶ್ವಾಸ್ ಟ್ರಸ್ಟ್‌ನ ನಿರ್ದೇಶಕಿ ಡಾ.ಒಲಿಂಡಾ ಪಿರೇರ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಒಲಿಂಡಾ ಪಿರೇರ, ತನಗೆ ದೊರೆತ ಪ್ರಶಸ್ತಿಯು ತನ್ನ ಸೇವಾ ಕ್ಷೇತ್ರದಲ್ಲಿ ಸಹಕರಿಸಿದ ಎಲ್ಲರಿಗೂ ಸಂದಾಯವಾಗಲಿದೆ ಎಂದರು.
ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಎಡಿಸಿ ಎಸ್.ಕುಮಾರ್, ಜಿಪಂ ಸಿಇಒ ಶ್ರೀವಿದ್ಯಾ, ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ., ನಿವೃತ್ತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಯೋಗೀಶ್, ತುಳು ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಶೇಖರ್ ರೈ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ :
ಪಲಪುಷ್ಪ ಪ್ರದರ್ಶನದ ಅಂಗವಾಗಿ ತೋಟಗಾರಿಕೆ ಇಲಾಖೆ ಏರ್ಪಡಿಸಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ದೊಡ್ಡ ಗಾತ್ರದ ತೋಟಗಾರಿಕೆ ಸ್ಪರ್ಧೆ -ಪ್ರಥಮ; ಸದಾಶಿವಯ್ಯ, ಸಣ್ಣ ಗಾತ್ರದ ತೋಟಗಾರಿಕೆ- ಪ್ರಥಮ; ಉಷಾ ದೇವ್‌ದಾಸ್, ಸಮಾಧಾನಕರ- ಮಮತಾ ಆಚಾರ್ಯ, ಎಲಿಝಬೆತ್ ಪಿರೇರ, ಕಿರಣ್ ವಿನೋದ್ ರಾಜ್, ಟೆರೇಸ್ ಗಾರ್ಡನಿಂಗ್- ಪ್ರಥಮ; ಕೃಷ್ಣಪ್ಪ ಗೌಡ, ದ್ವಿತೀಯ; ಕೆ.ಎಸ್. ಭಟ್, ತೃತೀಯ; ಮೋಹಿನಿ, ವಿಶೇಷ ಬಹುಮಾನ- ಪ್ರಥಮ: ಡ್ಯಾನಿ ಡಿಸೋಜಾ, ಪುಷ್ಪ ರಂಗೋಲಿ- ಪ್ರಥಮ; ವಿದ್ಯಾ ನಾಯಕ್, ದ್ವಿತೀಯ; ಲಕ್ಷ್ಮೆಶ, ಪುಷ್ಪ ಜೋಡಣೆ- ಪ್ರಥಮ; ಗೌರೀಶ್ ಮಲ್ಯ, ದ್ವಿತೀಯ; ನಂದಿತಾ ಸುಮನಾ, ಸಮಾಧಾನಕರ-ಪರಿಣೀತಾ, ವಿದ್ಯಾ ನಾಯಕ್, ತರಕಾರಿ ಕೆತ್ತನೆ- ಪ್ರಥಮ; ಶ್ರೀನಿವಾಸ್ ಕಾಲೇಜ್ ಆ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗಳಾದ ತಿಲಕ್‌ರಾಜ್, ರಜತ್ ಕುಮಾರ್ ಶೆಟ್ಟಿ, ಸಂಸ್ಥೆಯಲ್ಲಿ ಉದ್ಯಾನವನ ಬೆಳೆಸುವುದು- ಮಥಾಯಸ್ ಪಾರ್ಕ್ ಳ್ನೀರ್.