ಮನೋರಂಜನೆ

‘ನಮ್ಮೂರ ಹೈಕ್ಳು’ ದ್ವಿತೀಯ ಹಂತ ಮುಕ್ತಾಯ

Pinterest LinkedIn Tumblr

nammoorವಿ.ಪಿ. ಕಂಬೈನ್ಸ್ ಲಾಂಛನದಡಿಯಲ್ಲಿ ವಿ. ಶ್ರೀನಿವಾಸ್ ನಿರ್ಮಿಸುತ್ತಿರುವ ‘ನಮ್ಮೂರ ಹೈಕ್ಳು’ ಚಿತ್ರದ ದ್ವಿತೀಯ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ.

ಎಂಟು ದಿನಗಳ ಕಾಲ ನಡೆದ ಎರಡನೇ ಹಂತದ ಚಿತ್ರೀಕರಣದಲ್ಲಿ ಪವನ್, ಸುನಿಲ್, ತೇಜಸ್, ರಚಿತಾ ಅಣ್ಣಯ್ಯ ಭಾಗವಹಿಸಿದ್ದಾರೆ. ಪ್ರಸನ್ನ ನಿರ್ದೇಶನದ ಚಿತ್ರಕ್ಕೆ ಹೆಸರಘಟ್ಟ, ಭೂಮಿಕಾ ಸ್ಟುಡಿಯೋಸ್, ಪುಟ್ಟಣ್ಣ ಸ್ಟುಡಿಯೋಸ್‌ನಲ್ಲಿ ಚಿತ್ರೀಕರಣ ಮಾಡಲಾಯಿತು. ಇನ್ನು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ.

ಚಿತ್ರಕ್ಕೆ ಮನು ಛಾಯಾಗ್ರಹಣ, ಶಕೀಲ್ ಅಹಮ್ಮದ್ ಸಂಗೀತ, ಕಲೈ, ರಘು ನೃತ್ಯ, ಪ್ರಸನ್ನ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಇದೆ. ತಾರಾಗಣದಲ್ಲಿ ಪವನ್, ಕುರಿ ಸುನೀಲ್, ತೇಜಸ್, ರಘುಹಾಸನ್, ವಿನಯ್ ರಾಮ್, ಮಮತಾ ರಾವುತ್, ದೀಪ್ತಿ ಮನ್ನೆ, ರಚಿತಾ ಅಣ್ಣಯ್ಯ, ಸುಚೇಂದ್ರ ಪ್ರಸಾದ್, ರಮೇಶ್ ಭಟ್, ಎಂ.ಎಸ್. ಉಮೇಶ್, ಚಿಕ್ಕಣ್ಣ, ಬಿರಾದಾರ್ ಮುಂತಾದವರಿದ್ದು ವಿಶಿಷ್ಟ ಪಾತ್ರವೊಂದರಲ್ಲಿ ಸತ್ಯಜಿತ್ ಕಾಣಿಸಿಕೊಳ್ಳಲಿದ್ದಾರೆ.

Write A Comment