
ಮಂಗಳೂರು,ಜ.22: ಅನ್ಸಾರುಲ್ ಮಸಾಯಿಕೀನ್ ಕಿನ್ಯ ಇದರ ವತಿಯಿಂದ ಕೆ.ಸಿ.ಸಿ. ಕಾರ್ಡ್ ಹೆಲ್ತ್ ವಿತರಣೆ ಉಳ್ಳಾಲ: ಬಡ ಕುಟುಂಬಗಳಿಗೆ ಆರೋಗ್ಯವನ್ನು ರಕ್ಷಿಸಲು ಅನ್ಸಾರುಲ್ ಮಸಾಯಿಕೀನ್ ಎಸೋಸಿಯೇಶನ್ ಕೆ.ಸಿ.ಸಿ. ಹೆಲ್ತ್ ಕಾರ್ಡ್ ವಿತರಣೆ ಮಾಡುವ ಮೂಲಕ ಉತ್ತಮ ಸೇವೆ ಮಾಡಿದೆ ಎಂದು ಮೀಂಪ್ರಿ ಮಸೀದಿ ಇಮಾಂ ರಫೀಕ್ ಉಸ್ತಾದ್ ಹೇಳಿದರು.
ಅವರು ಅನ್ಸಾರುಲ್ ಮಸಾಯಿಕೀನ್ ಎಸೋಸಿಯೇಶನ್ ವತಿಯಿಂದ ಗುರುವಾರ ಕಿನ್ಯ ಬೆಳರಿಂಗೆಯ ಸಂಘದ ಕಚೇರಿಯಲ್ಲಿ ನಡೆದ ಕೆ.ಸಿ.ಸಿ. ಹೆಲ್ತ್ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸಕ್ತ ಕಾಲದ ನೂತನ ಆಹಾರದಿಂದ ಆರೋಗ್ಯ ಹದಗೆಟ್ಟು ಹೋಗುತ್ತಿದೆ. ಈಸಂದರ್ಭದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಲು ಹೆಲ್ತ್ ಕಾರ್ಡ್ ಬಹಳಷ್ಟು ಉಪಯೋಗಕ್ಕೆ ಬರುತ್ತದೆ. ಇದನ್ನು ಎಲ್ಲರು ಸದುಪಯೋಗಪಡಿಸಿ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ಸಾರುಲ್ ಮಸಾಯಿಕೀನ್ ಎಸೋಸಿಯೇಶನ್ನ ಅಧ್ಯಕ್ಷ ಸಿದ್ದೀಕ್ ಕಲ್ಲಾಂಡ ವಹಿಸಿದ್ದರು. ಸಯ್ಯಿದ್ ಆಲವಿ ತಂಙಳ್ ದುವಾ ನೆರವೇರಿಸಿದರು. ಸಂಘದ ಕಾರ್ಯದಶಿ ನಝೀರ್, ಕಲ್ಲಾಂಡ, ನೌಫಾಲ್ ಕಲ್ಲಾಂಡ, ಕಿನ್ಯ ಗ್ರಾ.ಪಂ. ಮಾಜಿ ಅಧ್ಯಕ್ಷ ಹಮೀದ್ ಕಿನ್ಯ ಮೀಂಪ್ರಿ ಮದ್ರಸ ಕಾರ್ಯದರ್ಶಿ ಅಮೀರ್ ಮೀಂಪ್ರಿ, ಕಿನ್ಯ ಗ್ರಾ.ಪಂ. ಸದಸ್ಯ ಫಾರೂಕ್ ಕಿನ್ಯ ಉಪಸ್ಥಿತರಿದ್ದರು. ಹಮೀದ್ ಕಿನ್ಯ ಅತಿಥಿಗಳನ್ನು ಸ್ವಾಗತಿಸಿದರು.