ನವದೆಹಲಿ: ಈಗ ಹರಿದ್ವಾರದಲ್ಲಿ ನಡೆಯುತ್ತಿರುವ ಆರ್ಧ ಕುಂಭ ಮೇಳದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಇಸಿಸ್ನೊಂದಿಗೆ ಸಂಪರ್ಕ ಹೊಂದಿದ್ದ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಿರುವುದಾಗಿ ದೆಹಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಉತ್ತರಖಾಂಡ್ನ ಮಂಗಳೊರ್ನಲ್ಲಿ ಅಖ್ಲಾಖ್ ಉರ್ ರೆಹಮಾನ್, ಮೊಹಮ್ಮದ್ ಉಸ್ಮಾನ್, ಮೊಹಮ್ಮದ್ ಅಝಿಮ್ ಶಾಹ್ ಮತ್ತು ಮೆಹರೋಜ್ ಎಂಬ ಶಂಕಿತ ಉಗ್ರರನ್ನು ಬಂಧಿಸಲಾಗಿದೆ ಎಂದು ದೆಹಲಿ ವಿಶೇಷ ಪೊಲೀಸ್ ಆಯುಕ್ತ ಅರವಿಂದ್ ದೀಪ್ ಅವರು ಹೇಳಿದ್ದಾರೆ.
ಬಂಧಿತ ಶಂಕಿತ ಉಗ್ರರರನ್ನು ಇಂದು ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ ಅವರನ್ನು 15 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಗುಪ್ತಚಲ ಇಲಾಖೆ ನೀಡಿದ ಮಾಹಿತಿ ಆಧಾರದ ಮೇಲೆ ಈ ನಾಲ್ವರು ಶಂಕಿತರನ್ನು ಬಂಧಿಸಲಾಗಿದ್ದು, ಆರೋಪಿಗಳು ಹರಿದ್ವಾರದ ಮೇಲೆ ದಾಳಿ ಸಂಚು ರೂಪಿಸಿದ್ದರು ಎಂದು ದೀಪ್ ತಿಳಿಸಿದ್ದಾರೆ.