ಉಡುಪಿ: ಉಡುಪಿ ಡಿಸಿ.ಐ.ಬಿ. ಪೊಲಿಸರು ಕಾರ್ಯಾಚರಣೆ ನಡೆಸಿ ನಾಲ್ವರು ಖತರ್ನಾಕ್ ಬೈಕ್ ಕಳ್ಳರನ್ನು ಬಂಧಿಸಿದ ಘಟನೆ ವರದಿಯಾಗಿದೆ.
ಕುಂದಾಪುರ ನಿವಾಸಿ ಸುಜನ (19), ಕುಂದಾಪುರ ತಾಲೂಕಿನ ನೇರಳಕಟ್ಟೆ ನಿವಾಸಿ ರವೀಂದ್ರ ಕುಮಾರ(19), ಶಿರೂರು ನಿವಾಸಿ ವಿಷ್ಣು ಮೇಸ್ತ (20), ಶಿರೂರು ಜಯರಾಜ್ ಆರ್ ಮೇಸ್ತ (24) ಬಂಧಿತ ಆರೋಪಿಗಳಾಗಿದ್ದಾರೆ.

ಮೋಜಿಗಾಗಿ ಕಳ್ಳತನ: ಆರೋಪಿಗಳ ವಶದಲ್ಲಿದ್ದ ಉಡುಪಿಯ ಬಲಾಯಿಪಾದೆ ಬಳಿ ಯಮಹ ಬೈಕ್, ಕುಂದಾಪುರ ಬಸ್ರೂರು ಮಾರ್ಗೊಳಿಯ ಬಳಿ ಹೀರೋ ಹೊಂಡಾ ಸ್ಪ್ಲೆಂಡ ರ್ ವಶಕ್ಕೆ ಪಡೆಯಲಾಗಿದ್ದಲ್ಲದೇ ಕೋಟೇಶ್ವರ ಮಾರ್ಕೋಡು ಜನತಾ ನಗರದಲ್ಲಿ ಯಮಹಾ ಬೈಕ್ ನ ಸವಾರ ಸವಾರಿಮಾಡುವ ಸಮಯ ಪೆಟ್ರೋಲ್ ಖಾಲಿಯಾಗಿದ್ದು, ಅಲ್ಲಿಯೇ ನಿಲ್ಲಿಸಿ ಪೆಟ್ರೋಲ್ ತರುವ ಸಮಯದಲ್ಲಿ ಆರೋಪಿತರು ಪೆಟ್ರೋಲ್ ಸಮೇತ ಬೈಕಿನಲ್ಲಿ ಹೊಂಚು ಹಾಕುತ್ತಿದ್ದು ಖಾಲಿಯಾದ ಬೈಕ್ ಗೆ ತಮ್ಮಲ್ಲಿ ಇದ್ದ ಪೆಟ್ರೋಲ್ ಹಾಕಿ ಬೈಕ್ ನ್ನು ಕಳವು ಮಾಡಿದ್ದು ವಿಶೇಷವಾಗಿತ್ತು.
ಒಟ್ಟು ಕಳವು ಮಾಡಿದ್ದ 2 ಯಮಹಾ ಮತ್ತು 1 ಸ್ಪ್ಲೆಂಡರ್ ಬೈಕ್, ಹಾಗೂ ಕಳವು ಮಾಡಲು ಹೋಗುವರೇ ಉಪಯೋಗಿಸುತ್ತಿದ್ದ ಬಜಾಜ್ ಪಲ್ಸರ್ ಬೈಕ್ ಒಟ್ಟು 4 ಮೋಟಾರು ಸೈಕಲ್ ಗಳನ್ನು ವಶಪಡಿಸಿಕೊಂಡಿರುತ್ತಾರೆ. ಮೋಜಿಗಾಗಿ ಬೈಕನ್ನು ಕಳವು ಮಾಡಿ ಉಪಯೋಗಿಸುತ್ತಿದ್ದರೆಂದು ತಿಳಿದು ಬಂದಿದೆ. ವಶಕ್ಕೆ ಪಡೆದ ಸ್ವತ್ತುಗಳ ಒಟ್ಟು ಮೌಲ್ಯ 1,60,000/- ರೂಪಾಯಿ ಎನ್ನಲಾಗಿದೆ..
ಕಾರ್ಯಾಚರಣೆ ತಂಡ: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ ಅಣ್ಣಾಮಲೈ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ ಕುಮಾರ್ ಮತ್ತು ಕುಂದಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಂಜುನಾಥ ಶೆಟ್ಟಿ ಮಾರ್ಗದರ್ಶನದಲ್ಲಿ, ಡಿ.ಸಿ.ಐ.ಬಿ ಇನ್ಸ್‌ಪೆಕ್ಟರ್ ಟಿ.ಆರ್ ಜೈಶಂಕರ್, ಕೋಟ ಠಾಣಾ ಪಿ.ಎಸ್.ಐ ಕಬ್ಬಾಳ್ ರಾಜ್ ಮತ್ತು ಡಿ.ಸಿ.ಐ.ಬಿ ಸಿಬ್ಬಂದಿಯವರಾದ ಎ.ಎಸ್.ಐ. ರೊಸಾರಿಯೊ ಡಿ’ಸೋಜ, ರವಿಚಂದ್ರ, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ಸಂತೋಷ ಕುಂದರ್, ಸುರೇಶ ಕೆ, ರಾಘವೇಂದ್ರ ಉಪ್ಪುಂದ, ಪ್ರವೀಣ, ಶಿವಾನಂದ ಪೂಜಾರಿ, ದಯಾನಂದ ಪ್ರಭು ಮತ್ತು ಕೋಟ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಗೋಪಾಲ, ಸುರೇಶ, ಸಂದೀಪ್ ಮತ್ತು ಡಿ.ಸಿ.ಐ.ಬಿ ವಿಭಾಗದ ವಾಹನ ಚಾಲಕರಾದ ನವೀನ್‌ಚಂದ್ರ ಹಾಗೂ ರಾಘವೇಂದ್ರ ಇವರುಗಳು ಪಾಲ್ಗೊಂಡಿದ್ದು
ಆರೋಪಿಗಳನ್ನು ಕುಂದಾಪುರ ಪೊಲೀಸ್ ಠಾಣೆಗೆ ಹಸ್ತಾಂತರಿಸಿರುತ್ತಾರೆ.