ಅಂತರಾಷ್ಟ್ರೀಯ

ಅಜರ್ ಬಂಧನ ಯಾವತ್ತೂ ಸಾಧ್ಯವಿಲ್ಲ; ಬಂಧನವಾದರೂ ಏನು ವ್ಯತ್ಯಾಸವಾಗುವುದಿಲ್ಲ: ಪಾಕ್, ಭಾರತಕ್ಕೆ ಜೈಶ್ ತಿರುಗೇಟು

Pinterest LinkedIn Tumblr

maulana-masoodಇಸ್ಲಾಮಾಬಾದ್: ಪಠಾಣ್ ಕೋಟ್ ವಾಯುನೆಲೆ ದಾಳಿಯ ರೂವಾರಿ, ಜೈಶ್ ಇ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಬಂಧನ ಯಾವತ್ತೂ ಸಾಧ್ಯವಿಲ್ಲ, ಒಂದು ವೇಳೆ ಬಂಧಿತನಾದರೂ ಅದರಿಂದ ನಮಗೆ ಏನೂ ವ್ಯತ್ಯಾಸವಾಗುವುದಿಲ್ಲ ಎಂದು ಜೈಶ್ ಇ ಮೊಹಮ್ಮದ್ ಸಂಘಟನೆ ಹೇಳಿದೆ.

ಮಸೂದ್ ನಮ್ಮ ಕಸ್ಟಡಿಯಲ್ಲಿದ್ದಾನೆ ಎಂದು ಪಂಜಾಬ್ ಕಾನೂನು ಸಚಿವ ರಾಣಾ ಸನಾವುಲ್ಲಾ ಹೇಳಿದ್ದರೆ, ಮತ್ತೊಂದೆಡೆ ನಮ್ಮ ಸಂಘಟನೆಯ ವರಿಷ್ಠನ ಬಂಧನ ಯಾವತ್ತೂ ಸಾಧ್ಯವಿಲ್ಲ ಎಂದು ಜೈಶ್ ಹೇಳುವ ಮೂಲಕ ಅಜರ್ ಬಂಧನದ ಗೊಂದಲ ಮುಂದುವರಿದಿದೆ.

ನಮ್ಮ ಸಂಘಟನೆಯ ಮುಖ್ಯಸ್ಥನ ಬಂಧನವಾಗಿದೆ ಎಂಬ ಸುದ್ದಿ ಕೇಳಿ ಹಲವರು ಸಂಭ್ರಮಿಸಿರಬಹುದು. ಆದರೆ ಮಸೂದ್ ಬಂಧನ ಯಾವತ್ತೂ ಸಾಧ್ಯವಿಲ್ಲ ಎಂದು ಘೋಷಿಸಿರುವುದಾಗಿ ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

Write A Comment