
ಬಂಟ್ವಾಳ,ಜ.15 : ತಾಲೂಕಿನ ಎಲಿಯನಡುಗೋಡು ಗ್ರಾಮದ ಕರೆಂಕಿಲದಲ್ಲಿ ಮನೆಯೊಂದು ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ.
ಇಲ್ಲಿನ ನಾರಾಯಣ ಪೂಜಾರಿ ಅವರ ಮನೆ ಬೆಂಕಿಗಾಹುತಿಯಾಗಿದ್ದು ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.ನಾರಾಯಣ ಅವರು ಬೆಳಗ್ಗೆ ಕೂಲಿ ಕೆಲಸಕ್ಕೆ ತೆರಳಿದ್ದು ಅವರ ಪತ್ನಿ ಮನೆಯಿಂದ ಹೊರಗಡೆ ತೆರಳಿದ್ದ ವೇಳೆ ಘಟನೆ ನಡೆದಿದೆ.ಮನೆಯ ಮೇಲ್ಚಾವಣಿಯ ಹಂಚು,ಮರದ ಪಕ್ಕಾಸು ಮತ್ತಿತರ ಮರದ ವಸ್ತುಗಳು,ಮನೆಯಲ್ಲಿದ್ದ ವಸ್ತ್ರಗಳು, ಪಾತ್ರೆ, ಕಪಾಟು, ಟಿ.ವಿ ವಿದ್ಯುತ್ ಉಪಕರಣಗಳ ಸಹಿತ ಎಲ್ಲಾವಸ್ತುಗಳು ಸುಟ್ಟು ಭಸ್ಮವಾಗಿದೆ.

ಗೋಡೆ ಬಿರುಕು ಬಿಟ್ಟಿದೆ ಘಟನೆಯಿಂದ ಸುಮಾರು 5 ಲ.ರೂ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.ಸುದ್ದಿ ತಿಳಿದ ಬಂಟ್ವಾಳ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದರು.ಗ್ರಾಮ ಕರಣಿಕ ಪ್ರವೀಣ್ ಹಾಗೂ ಕಂದಾಯ ಅಧಿಕಾರಿ ಆಸಿಫ್ ಇಕ್ಬಾಲ್ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.