ಕಾನ್ಪುರ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತಂತೆ ಸಂಸತ್ ನಲ್ಲಿ ನಿರ್ಣಯ ಕೈಗೊಳ್ಳುವಂತೆ ಈಗಾಗಲೇ ಒತ್ತಾಯಿಸಿದ್ದ ವಿಶ್ವಹಿಂದೂ ಪರಿಷತ್ ನ ಫೈಯರ್ ಬ್ರ್ಯಾಂಡ್ ಮುಖಂಡ ಪ್ರವೀಣ್ ತೊಗಾಡಿಯಾ ಇದೀಗ ಮಂದಿರ ನಿರ್ಮಾಣಕ್ಕಾಗಿ ಭಾರತದ ನೂರು ಕೋಟಿ ಹಿಂದೂಗಳಿಗೆ ಕೋರ್ಟ್ ನಿರ್ಧಾರಕ್ಕೆ ಕಾಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಅಮರ್ ಉಜಾಲಾ ಪತ್ರಿಕೆ ವರದಿಯಂತೆ, ರಾಮಮಂದಿರ ನಿರ್ಮಾಣದ ಕುರಿತಂತೆ ಸುಮಾರು ನೂರು ಕೋಟಿ ಹಿಂದೂಗಳಿಗೆ ಸುಪ್ರೀಂಕೋರ್ಟ್ ನ ನಿರ್ಧಾರಕ್ಕಾಗಿ ಕಾಯಲು ಸಾಧ್ಯವಿಲ್ಲ ಎಂದು ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿರುವುದಾಗಿ ಹೇಳಿದೆ.
ರಾಮ ಮಂದಿರ ನಿರ್ಮಾಣ ನೂರು ಕೋಟಿ ಹಿಂದೂಗಳ ಧಾರ್ಮಿಕ ಭಾವನೆಗೆ ಸಂಬಂಧಿಸಿದ ವಿಷಯವಾಗಿದೆ ಎಂದು ತೊಗಾಡಿಯಾ ಈ ಸಂದರ್ಭದಲ್ಲಿ ಹೇಳಿದ್ದಾರೆ.
-ಉದಯವಾಣಿ