
ಮಂಗಳೂರು,ಜ.14: ದೆಹಲಿಯ ನೊಯ್ಡಾದಲ್ಲಿನ ಬುದ್ಧ್ ಇಂಟರ್ನ್ಯಾಷನಲ್ ಸರ್ಕ್ಯೂಟ್ನಲ್ಲಿ ಜ 21ರಿಂದ 26ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಬಾಹಾ ಸ್ಟೂಡೆಂಟ್ ವೆಹಿಕಲ್ ರೇಸ್ 2016 ರಲ್ಲಿ ಸ್ಪರ್ಧಿಸಲು ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ರೂಪಿಸಿದ ‘ಹರಿಕೇನ್’ ಹೊರಟು ನಿಂತಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಾಲೇಜಿನ ಮೆಕ್ಯಾನಿಕಲ್ ವಿಭಾಗದ 30ವಿದ್ಯಾರ್ಥಿಗಳ ತಂಡ ರೂಪಿಸಿದ ಈ ಹರಿಕೇನ್ ಒಟ್ಟು6 ಲಕ್ಷ ರೂ ವೆಚ್ಚದಲ್ಲಿ 6 ತಿಂಗಳ ಅವದಿಯಲ್ಲಿ ನಿರ್ಮಾಣವಾಗಿದೆ.
ಗಂಟೆಗೆ 50 ಕಿ.ಮಿ ವೇಗದಲ್ಲಿ ಚಲಿಸುವ , ಸರಾಗವಾಗಿ ಗುಡ್ಡಗಾಡು, ಮೆಟ್ಟಿಲುಗಳನ್ನೇರುವ, ಭಾರವನ್ನೆಳೆಯುವ ಸಾಮರ್ಥ್ಯದ ಹರಿಕೇನ್ 305 ಸಿಸಿ 10 ಎಚ್.ಪಿ ಎಂಜಿನ್, ವಿದೇಶದಿಂದ ಸಿ.ವಿ.ಟೆಕ್ ಸಿವಿಟಿ, ಹಾಗೂ ನ್ಯೂಮ್ಯಾಟಿಕ್ ಸಸ್ಪೆನ್ಶನ್ ಬಳಸಿಕೊಂಡು ತಯಾರಾಗಿದೆ. ಕಾಲೇಜಿನ ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ.ಕೃಷ್ಣ ಪ್ರಭು, ಸಹ ಪ್ರಾಧ್ಯಾಪಕರದ ನವೀನ್ ಕಲಾಲ್ ಹಾಗೂ ಪ್ರಶಾಂತ್ ಎಂ.ವಿ. ಮಾರ್ಗದರ್ಶನದಲ್ಲಿ ವಾಹನ ರೂಪಿಸಲಾಗಿದೆ.

ರಾಷ್ಟ್ರಮಟ್ಟದಲ್ಲಿ ಒಟ್ಟು 60 ಕಾಲೇಜುಗಳು ಅಂತಿಮ ಸುತ್ತಿನಲ್ಲಿ ಸೆಣೆಸಲಿರುವ ಈ ಬಾಹಾ ರೇಸ್ನಲ್ಲಿ ರಾಜ್ಯದಿಂದ ಸ್ಪರ್ಧೆಯಲ್ಲಿರುವ 4ಮತ್ತು ದ.ಕ ಜಿಲ್ಲೆಯ ಎರಡು ತಾಂತ್ರಿಕ ಶಿಕ್ಷಣ ಕಾಲೇಜಿನ ತಂಡಗಳ ಪೈಕಿ ಕೆನರಾದ ಹರಿಕೇನ್ ಕೂಡಾ ಒಂದಾಗಿದೆ. ಹಲ್ದೀರಾಮ್ ಸ್ನ್ಯಾಕ್ಸ್, ಓಯಸಿಸ್ ಇನ್ಫೋಟೆಕ್,ಯೆಲ್ತಿಮಾರ್ ಇಂಡಸ್ಟ್ರೀಸ್ ಹಾಗೂ ಕೆನರಾ ಬ್ಯಾಂಕ್ ಈ ಯೋಜನೆಯನ್ನು ಕಾಲೇಜಿನ ಆಡಳಿತ ಮಂಡಳಿಯ ನೆರವಿನ ಜತೆಗೆ ಪ್ರಾಯೋಜಿಸಿವೆ.
ರಾಷ್ಟ್ರೀಯ ಯುವದಿನಾಚರಣೆಯ ಸಂದರ್ಭದಲ್ಲಿ ಹರಿಕೇನ್ನ ಅನಾವರಣವನ್ನು ಕಾಲೇಜಿನಲ್ಲಿಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಕಾರ್ಯದರ್ಶಿ ಎಂ.ರಂಗನಾಥ ಭಟ್ ಹಾಗೂ ಕಾಲೇಜಿನ ಸಂಚಾಲಕ ಎಂ.ಪದ್ಮನಾಭ ಪೈ ನೆರವೇರಿಸಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್, ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ.ಕೃಷ್ಣ ಪ್ರಭು, ಆಡಳಿತಾಧಿಕಾರಿ ಗಣೇಶ್ ಕಾಮತ್ ಮೂಡುಬಿದಿರೆ, ಪ್ರಾಯೋಜಕರ ಪೈಕಿ ವಿಜಯಲಕ್ಷ್ಮೀ ಶೆಣೈ ಎಲ್ತಿಮಾರ್, ಜಿ.ಆರ್.ಪೈ ಮತ್ತಿತರರು ಉಪಸ್ಥಿತರಿದ್ದರು.
ಹರಿಕೇನ್ ತಂಡದ ನಾಯಕ ಭಗೀರಥ ಸೊಮಯಾಜಿ ಸಹಕರಿಸಿದವರಿಗೆಲ್ಲ ಕೃತಜ್ಞತೆ ಸಲ್ಲಿಸಿದರು. ತಂಡದ ಉಪನಾಯಕ ಕಿರಣ್ಪೈ ತಾಂತ್ರಿಕ ವಿವರಗಳನ್ನು ನೀಡಿದರು. ಸೂರಜ್ ಶೆಣೈ ಕಾರ್ಯಕ್ರಮ ನಿರ್ವಹಿಸಿದರು. ತಂಡದ ಪುನೀತ್ ರಾಜ್ ಅವರಿಂದ ವಾಹನದ ಟ್ರಯಲ್ ರೈಡ್ ನಡೆಯಿತು.