ಕನ್ನಡ ವಾರ್ತೆಗಳು

ಬೆಂಗರೆ ಆಟೋ ಪಾಕ್ ಅಧಿಕೃತ ಗೊಳಿಸಲು ಆಗ್ರಹಿಸಿ ಆಟೋಚಾಲಕರಿಂದ ಪ್ರತಿಭಟನೆ.

Pinterest LinkedIn Tumblr

Auto_malaka_protest

ಮಂಗಳೂರು,ಜ.12:  ಬೆಂಗರೆ ಕಸಬದ ಆಟೋರಿಕ್ಷಾ ನಿಲ್ದಾಣವನ್ನು ಎತ್ತಂಗಡಿ ಮಾಡಲು ಕೆಲವು ಸ್ಥಾಪಿತ ಹಿತಾಸಕ್ತಿಗಳು ಹುನ್ನಾರ ನಡೆಸುತ್ತಿದ್ದು ಪ್ರಸ್ತುತ ಆಟೋ ಪಾರ್ಕನ್ನು ಅಧಿಕೃತಗೊಳಿಸಬೇಕೆಂದು ಒತ್ತಾಯಿಸಿ ಬೆಂಗರೆ ಕಸಬದ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ನೇತ್ರತ್ವದಲ್ಲಿ ಮಂಗಳವಾರ ನಗರದ ಬಂದರು ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ DYFIನ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ಅವರು ಬೆಂಗರೆ ಪ್ರದೇಶದ ಜನರಿಗೆ ಕನಿಷ್ಠ ದರ 20ರೂ. ಪ್ರಯಾಣ ದರ ವಿಧಿಸಿ ಉತ್ತಮ ಸೇವೆ ನೀಡುತ್ತಿರುವ ಬೆಂಗರೆ ಆಟೋ ಚಾಲಕರನ್ನು ಅನಗತ್ಯ ತೊಂದರೆ ಕೊಡುತ್ತಿರುವುದು ಖಂಡನೀಯ . ಜನರು ದೋಣಿ ಇಳಿದು ಬರುವ ಕಡವಿನ ಬಳಿಯಲ್ಲೇ ಆಟೋಪಾರ್ಕನ್ನು ಮುಂದುವರಿಸಲು ಬಂದರು ಇಲಾಖೆ ಅವಕಾಶ ನೀಡಬೇಕೆಂದು ಅವರು ಒತ್ತಾಯಿಸಿದರು. DYFI ಜಿಲ್ಲಾ ಕಾರ್‍ಯದರ್ಶಿ ಸಂತೋಷ್ ಬಜಾಲ್, ಕಾರ್ಮಿಕ ಮುಖಂಡ ವಿಲ್ಲಿವಿಲ್ಸನ್ ಹಾಗೂ ಆಟೋರಿಕ್ಷಾ ಚಾಲಕರ ಸಂಘಟನೆಯ ಮುಖಂಡರಾದ ಅನ್ಸಾರ್ ಬಜಾಲ್ ಮಾತನಾಡಿ ಬೆಂಗರೆ ಆಟೋಚಾಲಕರ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದರು .

ಪ್ರತಿಭಟನೆಯ ನೇತ್ರತ್ವವನ್ನು ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾದ ಅಜೀಜ್ ಬೆಂಗರೆ, ಕಾರ್ಯದರ್ಶಿ ಮನ್ಸೂರ್ ಅಹ್ಮದ್ , DYFI ಬೆಂಗರೆ ಗ್ರಾಮ ಸಮಿತಿ ಅಧ್ಯಕ್ಷ ಎ.ಬಿ ನೌಶದ್ , ಕಾರ್ಯದರ್ಶಿ ರಿಯಾಝ್ ಬೆಂಗರೆ , ಉಪಾಧ್ಯಕ್ಷ ಹನೀಫ್ , ಹಸನ್‌ಮೋನು ಮುಂತಾದವರು ವಹಿಸಿದ್ದರು.

Write A Comment