ಮನೋರಂಜನೆ

921 ರನ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ರಿಕ್ಷಾ ಚಾಲಕನ ಮಗ !

Pinterest LinkedIn Tumblr

rik

ಮುಂಬೈ:ರಿಕ್ಷಾ ಚಾಲಕರೊಬ್ಬರ ಮಗ ಶಾಲಾ ಕ್ರಿಕೆಟ್‍ನಲ್ಲಿ 117 ವರ್ಷದ ದಾಖಲೆಯನ್ನು ಮುರಿದು ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಭಂಡಾರಿ ಕಪ್ ಕ್ರಿಕೆಟ್‍ನಲ್ಲಿ ಮುಂಬೈಯ ಶಾಲೆಯೊಂದರ ಆಟಗಾರ ಪ್ರಣವ್ ಔಟಾಗದೇ 921 ರನ್‍ಗಳಿಸಿ ಕ್ರೀಸ್‍ನಲ್ಲಿದ್ದಾರೆ.

2 ದಿನಗಳ ಆಟದಲ್ಲಿ ಮೊದಲ ದಿನ ಕೆಸಿ ಗಾಂಧಿ ಶಾಲೆಯ 15 ವರ್ಷದ ಪ್ರಣವ್ ಧನ್‍ವಾಡೆ 199 ಎಸೆತಗಳಲ್ಲಿ 652 ರನ್ ಗಳಿಸಿದ್ದರು. ತಮ್ಮ ಇನ್ನಿಂಗ್ಸ್ ನಲ್ಲಿ 82 ಬೌಂಡರಿ, 42 ಸಿಕ್ಸ್ ಸಿಡಿಸಿದ್ದರು. ಮೊದಲ ದಿನ ಅಂತ್ಯಗೊಂಡಾಗ ಕೆಸಿ ಗಾಂಧಿ ಶಾಲೆ 1 ವಿಕೆಟ್ ನಷ್ಟಕ್ಕೆ 956 ರನ್‍ಗಳಿಸಿತ್ತು.

ಇಲ್ಲಿಯವರೆಗೆ ಶಾಲಾ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಇಂಗ್ಲೆಂಡಿನ ಎಇಜಿ ಕಾಲಿನ್ಸ್ ಹೆಸರಿನಲ್ಲಿತ್ತು. 1899ರಲ್ಲಿ ಇಂಗ್ಲೆಂಡಿನ ಎಇಜಿ ಕಾಲಿನ್ಸ್ ಔಟಾಗದೇ 628 ರನ್ ಗಳಿಸಿದ್ದರು.

ವಿಕೆಟ್ ಕೀಪರ್ ಬ್ಯಾಟ್ಸಮನ್ ಆಗಿರುವ ಪ್ರಣವ್ ಧನ್‍ವಾಡೆ ಮಹೇಂದ್ರ ಸಿಂಗ್ ಧೋನಿ ಅವರ ಅಭಿಮಾನಿಯಾಗಿದ್ದು ಧೋನಿಯಂತೆ ಸ್ಟೋಟಕ ಬ್ಯಾಟ್ಸ್‍ಮನ್ ಆಗಬೇಕೆಂಬ ಕನಸು ಕಂಡಿದ್ದಾರೆ. ಪ್ರಣವ್ 300 ರನ್‍ಗಳಿಸಿದಾಗ ತಂದೆ ಅಂಗಳಕ್ಕೆ ಬಂದು ಮಗನ ಆಟವನ್ನು ನೋಡಿ ಸಂತೋಷಪಟ್ಟರು.

Write A Comment