ಮನೋರಂಜನೆ

ಪುನೀತ್ ಚಿತ್ರ ನಿರ್ದೇಶಿಸಲಿರುವ ನಂದ ಕಿಶೋರ್

Pinterest LinkedIn Tumblr

Puneeth Rajkumar (1)

ಬೆಂಗಳೂರು: ಸಾಲು ಸಾಲು ಸಿನೆಮಾಗಳ ನಿರ್ದೇಶನದಲ್ಲಿ ನಿರತರಾಗಿರುವ ನಿರ್ದೇಶಕ ನಂದ ಕಿಶೋರ್, ಸದ್ಯಕ್ಕೆ ಪ್ರದೀಪ್ ನಟನೆಯ ‘ಟೈಗರ್’ ಸಿನೆಮಾದ ಹಾಡುಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಂತರ ಅವರು ‘ಓ ಮೈ ಗಾಡ್’ ಸಿನೆಮಾದ ಕನ್ನಡ ಅವತರಿಣಿಕೆ ನಿರ್ದೇಶಿಸಲಿದ್ದು, ಇದರಲ್ಲಿ ಸುದೀಪ್ ಮತ್ತು ಉಪೇಂದ್ರ ನಟಿಸುತ್ತಿದ್ದಾರೆ ಅವರ ಮುಂದಿನ ಚಿತ್ರದಲ್ಲಿ ಪುನೀತ್ ರಾಜಕುಮಾರ್ ನಟಿಸಲಿದ್ದಾರಂತೆ. ತೆಲುಗು ಮತ್ತು ತಮಿಳು ಸಿನೆಮಾಗಳನ್ನು ನಿರ್ಮಿಸುತ್ತಿದ್ದ ಎ ಎಂ ರತ್ನಂ ಈಗ ಮೊದಲ ಬಾರಿಗೆ ಈ ಸಿನೆಮಾದ ಮೂಲಕ ನಿರ್ಮಾಪಕರಾಗಿ ಕನ್ನಡ ಚಿತ್ರೋದ್ಯಮಕ್ಕೆ ಧುಮುಕಲಿದ್ದಾರೆ.

ಈ ಯೋಜನೆ ಮಾರ್ಚ್ ನಿಂದ ಪ್ರಾರಂಭವಾಗಲಿದ್ದು, ಶಿವ ನಿರ್ದೇಶನದ ಮತ್ತು ಅಜಿತ್ ನಟಿಸಿದ್ದ ತಮಿಳು ಚಿತ್ರ ‘ವೇದಾಲಮ್’ನ ರಿಮೇಕ್ ಎನ್ನಲಾಗಿದೆ.

ಇದನ್ನು ಧೃಢೀಕರಿಸಿರುವ ನಂದ “ಹೌದು ಎ ಎಂ ರತ್ನಂ ನಿರ್ಮಿಸುತ್ತಿರುವ ಸಿನೆಮಾದಲ್ಲಿ ಪುನೀತ್ ಅವರನ್ನು ನಿರ್ದೇಶಿಸಲಿದ್ದೇನೆ. ಎಲ್ಲವೂ ಮಾತಿನಲ್ಲಿ ಒಪ್ಪಿಗೆಯಾಗಿದೆ. ಅವರು ಶಬರಿಮಲೈನಿಂದ ಬಂದ ಮೇಲೆ ನಿರ್ಮಾಪಕರು ಅಧಿಕೃತ ಘೋಷಣೆ ಮಾಡಲಿದ್ದಾರೆ” ಎಂದಿದ್ದಾರೆ.

“ಡಾ. ರಾಜಕುಮಾರ್ ಕುಟುಂಬದ ಸದಸ್ಯರೊಂದಿಗೆ ಕೆಲಸ ಮಾಡುವುದ ಗೌರವ” ಎನ್ನುತ್ತಾರೆ ನಂದ.
ಇವಿಷ್ಟೇ ಅಲ್ಲದೆ, ನಟ ಧೃವ್ ಅವರ ಒಂದು ಸಿನೆಮಾ ಕೂಡ ನಿರ್ದೇಶಿಸಲಿದ್ದು ಶರಣ್ ಮತ್ತು ಶ್ರೀಮುರಳಿ ಅವರ ಯೋಜನೆಗಳೂ ಕೂಡ ಸಾಲಿನಲ್ಲಿವೆ.

Write A Comment