ರಾಷ್ಟ್ರೀಯ

ಇನ್ನು ಮುಂದೆ ಫೇಸ್ ಬುಕ್ ಬಳಸುವಾಗ ಸೈನಿಕರೇ ಹುಷಾರ್ ಆಗಿರಿ…! ಸಾಮಾಜಿಕ ಜಾಲತಾಣ ಬಳಕೆಗೆ ಸೇನೆಯಿಂದ ನಿಯಮ ಜಾರಿ

Pinterest LinkedIn Tumblr

facebook

ಚಂಡೀಗಢ: ಸಾಮಾನ್ಯ ಜನರು ಫೇಸ್ ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಏನು ಮಾಡಿದರೂ ಯಾರೂ ಕೇಳುವುದಿಲ್ಲ. ಆದರೆ ಇವರಿಗೆ ಮಾತ್ರ ಹಲವು ಕಟ್ಟಪ್ಪಣೆಗಳನ್ನು ವಿಧಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡಬಾರದು, ಅಪರಿಚಿತರು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದರೆ ಅದನ್ನು ಸ್ವೀಕರಿಸಬಾರದು ಎಂದೆಲ್ಲ ಆಜ್ಞೆ ಹೊರಡಿಸಿದೆ. ಇದು ನಮ್ಮ ದೇಶ ಕಾಯುವ ಸೈನಿಕರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಸೇನೆ ವಿಧಿಸಿರುವ ನಿಯಮಗಳು.

ಸೈನಿಕರು ಮತ್ತು ಅವರ ಕುಟುಂಬ ಸದಸ್ಯರು ಯಾವಾಗಲೂ ತಮ್ಮ ಜೀವನದ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂಬುದಕ್ಕೆ ಸಾಮಾಜಿಕ ಜಾಲತಾಣಗಳ ಬಳಕೆಗೆ ಮಾರ್ಗಸೂಚಿ ಹೊರಡಿಸಿದೆ.

ಗುರುತು ಪರಿಚಯವಿಲ್ಲದವರನ್ನು ಫ್ರೆಂಡ್ ಎಂದು ಸ್ವೀಕರಿಸಿದ ಮೇಲೆ ಆಗುವ ಎಡವಟ್ಟುಗಳು, ತೊಂದರೆ ಬರಬಾರದೆಂದು ಹೀಗೆ ಮಾಡಲಾಗಿದೆ.ಮೊನ್ನೆ ಡಿಸೆಂಬರ್ 28ರಂದು ವಾಯುಪಡೆ ಸಿಬ್ಬಂದಿ ರಂಜಿತ್ ಕೆ.ಕೆ.ಫೇಸ್ ಬುಕ್ ನಲ್ಲಿ ಪರಿಚಯವಾದ ಯುವತಿಯೊಂದಿಗೆ ತಮ್ಮ ಮಾಹಿತಿಗಳನ್ನು ಹಂಚಿಕೊಂಡ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದರು. ಆಕೆ ತಾನು ಇಂಗ್ಲೆಂಡಿನಲ್ಲಿ ಪತ್ರಕರ್ತೆಯೆಂದು ಪರಿಚಯ ಮಾಡಿಕೊಂಡಿದ್ದಳು. ಆದರೆ ಆಕೆ ಪಾಕಿಸ್ತಾನದ ಗೂಢಚಾರಿಣಿಯಾಗಿದ್ದಳು. ಪಠಾಣ್ ಕೋಟ್ ವಾಯುನೆಲೆಗೆ ಇತ್ತೀಚೆಗೆ ಭೇಟಿ ಮಾಡಿದ್ದ ಯುವತಿಗೆ ರಂಜಿತ್ ಸಕಲ ವಿವರ ಹಂಚಿಕೊಂಡಿದ್ದರು.

ಈ ಸಂಬಂಧ ಸೇನಾಪಡೆ ಡಿಸೆಂಬರ್ 31ರಂದು ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ನಿಯಮಗಳ ಸುತ್ತೋಲೆ ಹೊರಡಿಸಿದ್ದು, ಆ ನಿಯಮಗಳು ಇಂತಿವೆ.

-ಸೈನಿಕರು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡಬಾರದು.
-ಪ್ರೋಫೈಲ್ ಚಿತ್ರದಲ್ಲಿ ಸಮವಸ್ತ್ರವಿರುವ ಫೋಟೋಗಳನ್ನು ಹಾಕಬಾರದು.
-ಬಹುಮಾನಗಳು ಸಿಗುತ್ತವೆ ಎಂಬ ಆಮಿಷದ ಜಾಹೀರಾತುಗಳನ್ನು ಕ್ಲಿಕ್ಕಿಸಬಾರದು.
-ಸೈನಿಕರು ತಮ್ಮ ಅಧಿಕೃತ ಗುರುತುಗಳನ್ನು ಹಂಚಿಕೊಳ್ಳಬಾರದು.
-ಶಸ್ತ್ರಾಸ್ತ್ರಗಳ ಫೋಟೋಗಳನ್ನು ಹಾಕಬೇಡಿ.
-ಸೈನಿಕರು ತಮ್ಮ ರ್ಯಾಂಕ್, ಬ್ಯಾಟಲಿ ಮತ್ತು ನಿಯೋಜನೆಗೊಂಡ ಸ್ಥಳಗಳ ಮಾಹಿತಿಯನ್ನು ಬಹಿರಂಗಪಡಿಸೇಡಿ.
-ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್ ಗಳನ್ನು ಸ್ವೀಕರಿಸಬೇಡಿ.
-ಸೈನಿಕರ ಮಕ್ಕಳು ತಮ್ಮ ಪೋಷಕರ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ.
-ಸೇನಾ ಚಿತ್ರಗಳನ್ನು ಬ್ಯಾಕ್ ಗ್ರೌಂಡ್ ಫೋಟೋಗಳಾಗಿ ಬಳಸುವುದು ಬೇಡ.
-ಸೇನೆಗೆ ಸಂಬಂಧಿಸಿದ ಮಾಹಿತಿಗಳನ್ನು ಪರ್ಸನಲ್ ಕಂಪ್ಯೂಟರ್, ಲ್ಯಾಪ್ ಟಾಪ್ ಗಳಲ್ಲಿ ಸೇವ್ ಮಾಡಿಕೊಳ್ಳಬೇಡಿ.

Write A Comment