ನವದೆಹಲಿ, ಡಿ. 31- ದಕ್ಷಿಣ ಆಫ್ರಿಕಾ ವಿರುದ್ಧ ನಾಗಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ ಎಬಿಡಿವಿಲಿಯರ್ಸ್‌ರ ವಿಕೆಟ್ ಪಡೆದದ್ದೇ ಕಳೆದ ವರ್ಷದ ನನ್ನ ಶ್ರೇಷ್ಠ ಪ್ರದರ್ಶನವಾಗಿದೆ ಎಂದು ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ. 2015ರಲ್ಲಿ ಯುವ ನಾಯಕನಾದ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಜಯಸಿದ ತಂಡದಲ್ಲಿ ನಾನಿದ್ದೆ ಎಂಬುದೇ ನನಗೆ ಹೆಮ್ಮೆ ಆಗಿದೆ ಎಂದರು. ಅಲ್ಲದೆ ಶ್ರೀಲಂಕಾ ಸರಣಿಯಲ್ಲಿ ವಿದೇಶದಲ್ಲಿ ಮೊದಲ ಸರಣಿ ಗೆಲುವಿನೊಂದಿಗೆ ಸರಣಿ ಶ್ರೇಷ್ಠನಾಗಿ ಹೊರಹೊಮ್ಮಿದ್ದು ಕೂಡ ಸಂತಸ ತಂದಿದೆ ಎಂದು
ಚೆನ್ನೈ ಮೂಲದ ಆಟಗಾರ ಅಶ್ವಿನ್ ತಿಳಿಸಿದರು.
2015ನೇ ವರ್ಷದುದ್ದಕ್ಕೂ ಉತ್ತಮ ಪ್ರದರ್ಶನದೊಂದಿಗೆ ತನ್ನ ರೇಟಿಂಗ್ ಪಾಯಿಂಟ್ಸ್ (871)ಅನ್ನು ಏರಿಸಿಕೊಂಡು ಟೆಸ್ಟ್‌ನಲ್ಲಿ ನಂಬರ್ 1 ಬೌಲರ್ ಆಗಿ ರೂಪುಗೊಂಡಿರುವ ಅಶ್ವಿನ್ ಆಡಿದ 9 ಟೆಸ್ಟ್ ಪಂದ್ಯಗಳಿಂದ 7 ಬಾರಿ 5 ವಿಕೆಟ್ ಹಾಗೂ 2 ಬಾರಿ 10 ವಿಕೆಟ್ ಪಡೆದ ಸಾಧನೆ. ಅಲ್ಲದೆ 150 ಟೆಸ್ಟ್ ವಿಕೆಟ್‌ಗಳ ಮೈಲಿಗಲ್ಲು ಸಾಧಿಸಿದರು.