ಕನ್ನಡ ವಾರ್ತೆಗಳು

ನಟನಾ ನೃತ್ಯ ಅಕಾಡೆಮಿಯ ವಾರ್ಷಿಕೋತ್ಸವ

Pinterest LinkedIn Tumblr

mumbai_dance_photo_1

ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : ಖ್ಯಾತ ನೃತ್ಯ ಕಲಾವಿದೆ ವಿದೂಶಿ ಗೀತಾ ಸಾಲ್ಯಾನ್ ಅವರ ನಟನಾ ನೃತ್ಯ ಅಕಾಡೆಮಿ ಪೊವಾಯಿ ಇದರ 7ನೇ ವಾರ್ಷಿಕೋತ್ಸವ ಸಮಾರಂಭವು ನವೀನ್ ಬಾಯಿ ಠಕ್ಕರ್ ಸಭಾಗೃಹ, ರಾಜ್ ಪೂರಿಯ ಹಾಲ್ ಮತ್ತು ಶಿವ ಸಾಗರ್ ಹೋಟೇಲು ಸಮೀಪ, ವಿಲೆ ಪಾರ್ಲೆ ಗುಜರಾಥಿ ಮಿತ್ರ ಮಂಡಳ್, ವಿಲೆಪಾರ್ಲೆ ಪೂ. ಮುಂಬಯಿ ಇಲ್ಲಿ ಜರಗಿತು.

ಗೀತಾ ಸಾಲ್ಯಾನ್ ಅವರ ಮಾರ್ಗದರ್ಶನದಲ್ಲಿ ಅವರ ಶಿಶ್ಯೆಯರಿಂದ ನಡೆದ ವಿವಿದ ತರದ ನೃತ್ಯ ಕಾರ್ಯಕ್ರಮವು ಪ್ರೇಕ್ಷಕರ ಗಮನ ಸೆಳೆಯಿತು.

mumbai_dance_photo_2 mumbai_dance_photo_3 mumbai_dance_photo_4 mumbai_dance_photo_5 mumbai_dance_photo_6 mumbai_dance_photo_7

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮರಾಠಿ ನಟಿ ಕವಿತಾ ಪಾವ್ಸರ್ ಮತ್ತು ಕೋರಿಯೋಗ್ರಾಫರ್ ಅಮೋಲ್ ಗಾಯಕ್ವಾಡ್ ಆಗಮಿಸಿದ್ದು ನೃತ್ಯ ಲೋಕಕ್ಕೆ ವಿದೂಶಿ ಗೀತಾ ಸಾಲ್ಯಾನ್ ಅವರ ಕೊಡುಗೆಯನ್ನು ಮೆಚ್ಚಿ ಮಾತನಾಡಿದರು. ಶಾಸ್ತ್ರೀಯ ನೃತ್ಯ ಕಲೆಯನ್ನು ಅಭಿವೃದ್ದಿಗೊಳಿಸಲು ನೃತ್ಯ ಅಕಾಡೆಮಿಯ ಅಗತ್ಯವಿದೆ ಎಂದರು. ಅಥಿತಿಯಾಗಿ ಆಗಮಿಸಿದ ಉದ್ಯಮಿ ಸತೀಶ್ ಪೂಜಾರಿ ಏರ್ಮಾಳ್ ಅವರು ಸಮಾರಂಭಕ್ಕೆ ಅಬಿನಂದನೆ ಸಲ್ಲಿಸಿದರು.

ಮುಂಬಯಿಯ ನಲಂದಾ ನೃತ್ಯ ಕಲಾ ಮಹಾವಿದ್ಯಾಲಯದಿಂದ ಭರತ ನಾಟ್ಯವನ್ನು ಅಭ್ಯಾಸಮಾಡಿ ಇದೀಗ ಪವಾರ್ ಪಬ್ಲಿಕ್ ಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿ ದುಡಿಯುತ್ತಿರುವ ಗೀತಾ ಸಾಲ್ಯಾನ್ ದೇಶದ ವಿವಿದೆಡೆ ನೃತ್ಯವನ್ನು ಪ್ರದರ್ಶಿಸಿ ಜನಪ್ರಿಯರಾಗಿದ್ದು ಅವರು ನೂರಾರು ಮಕ್ಕಳನ್ನು ನೃತ್ಯಕಲಾವಿದರನ್ನಾಗಿ ಮಾಡಿರುವರು.

Write A Comment