ಕನ್ನಡ ವಾರ್ತೆಗಳು

ಜ.04 : ವಸುದೈವ ಕುಟುಂಬಕಂ ನ ತತ್ವ ಸಾರ

Pinterest LinkedIn Tumblr

yuva_bedrdyar_photo

ಮಂಗಳೂರು,ಡಿ.31 : ಧರ್ಮಗಳ ನಡುವಿನ ಕಂದಕವನ್ನು ಕಡಿಮೆ ಮಾಡಿ ಎಲ್ಲಾ ಜಾತಿ, ಧರ್ಮದವರು ಕೂಡಿ ಬಾಳುವ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಮಾಜದ ಸದೃಢತೆಯ ಪ್ರತೀಕವಾಗಿರುವ ಯುವ ಬ್ರಿಗೇಡ್ ನ ಸದ್ಭಾವನಾ ವಿಭಾಗ ಮತ್ತೊಂದು ಹೆಜ್ಜೆ ಇಟ್ಟಿದೆ.

ವಸುದೈವ ಕುಟುಂಬಕಂ ನ ತತ್ವವನ್ನು ಸಾರುವ ಮತ್ತು ಅದನ್ನು ಜೀವನದಲ್ಲಿ ಯಥಾವತ್ತಾಗಿ ಅಳವಡಿಸುವ ಪ್ರಯತ್ನದ ಫಲವಾಗಿ ಜನವರಿ 4, ಸೋಮವಾರ ದಂದು ಮಂಗಳೂರಿನ ಟಿವಿ ರಮಣ್ ಪೈ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸಂಜೆ ಆರು ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ನ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿರುವ ಫೈಜ್ ಖಾನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಹೈಡ್ರೋಸ್ ಹಾಜಿ ಮೆಮರೆಬಲ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಚೇರ್ ಮೆನ್ ಜನಾಬ್ ಹಾಜಿ ಬಿ ಅಬ್ದುಲ್ ರಜಾಕ್, ಪ್ರಗತಿಪರ ಕೃಷಿಕರಾಗಿರುವ ಮೊಹಮ್ಮದ್ ಮುಸ್ತಫಾ ಗೋಳ್ತಮಜಲು ಹಾಗೂ ಯುವ ಬ್ರಿಗೇಡ್ ನ ಮಾರ್ಗದರ್ಶಕರಾಗಿರುವ ಚಕ್ರವರ್ತಿ ಸೂಲಿಬಲೆ ಅವರು ಉಪಸ್ಥಿತರಿರುತ್ತಾರೆ ಎಂದು ಯುವ ಬ್ರಿಗೇಡ್ ನ ಮಾರ್ಗದರ್ಶಕ ಮಂಗಲ್ಪಾಡಿ ನರೇಶ್ ಶೆಣೈ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವರದಿ: ಮಂಜು ನೀರೆಶ್ವಲ್ಲ್ಯ

Write A Comment