ಕನ್ನಡ ವಾರ್ತೆಗಳು

ಡಿ.31 ಸೆಟ್‌ಟಾಪ್ ಬಾಕ್ಸ್ ಅಳವಡಿಸಲು ಕಡೆದಿನ: ಕೇಬಲ್ ಟಿವಿ ಡಿಜಿಟೈಸೇಶನ್ ಕಡ್ಡಾಯ..!

Pinterest LinkedIn Tumblr

ಉಡುಪಿ: ಕೇಂದ್ರ ಸರ್ಕಾರದ ಡಿಜಿಟಲ್ ಅಡ್ರಸೇಬಲ್ ಕೇಬಲ್ ಟಿವಿ ಸಿಸ್ಟಮ್ (ಡ್ಯಾಸ್) ನಿಯಮ ಪ್ರಕಾರ ಉಡುಪಿಯ ಎಲ್ಲ ನಗರ ಪ್ರದೇಶದ ಗ್ರಾಹಕರನ್ನು ಡಿಸೆಂಬರ್ 31ರೊಳಗೆ ಡಿಜಿಟಲ್ ಸೆಟ್‌ಟಾಪ್ ಬಾಕ್ಸ್ ಅಳವಡಿಸಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಸೂಚನೆ ನೀಡಿದರು.

Udp_Dettop Box_News (1) Udp_Dettop Box_News (2)

ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ಕೇಬಲ್ ಟಿವಿ ಆಪರೇಟರ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅಧಿಸೂಚನೆಯಂತೆ ಕೇಬಲ್ ಟಿವಿ ಡಿಜಿಟೈಸೇಶನ್ ಕಡ್ಡಾಯ. ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ರಾಜ್ಯ ಕಂದಾಯ ಇಲಾಖೆ ನೋಡಲ್ ಇಲಾಖೆಯಾಗಿದ್ದು, ಜಿಲ್ಲೆಗಳಲ್ಲಿ ಅಪರ ಜಿಲ್ಲಾಧಿಕಾರಿ ನೋಡಲ್ ಅಧಿಕಾರಿಯಾಗಿರುತ್ತಾರೆ.

ಡಿಜಿಟೈಸೇಶನ್ -2011ರಿಂದ ಆರಂಭಗೊಂಡಿದ್ದು ಪ್ರಥಮ ಹಂತದಲ್ಲಿ ಮೆಟ್ರೋಗಳಾದ ದೆಹಲಿ, ಕಲ್ಕತ್ತ, ಮುಂಬಯಿ, ಚೆನ್ನೈಯಲ್ಲಿ ಅನುಷ್ಠಾನಕ್ಕೆ ಒತ್ತು ನೀಡಲಾಗಿದೆ. ಎರಡನೇ ಹಂತದಲ್ಲಿ ಹತ್ತು ಲಕ್ಷಕ್ಕಿಂತ ಹೆಚ್ಚಿರುವ ನಗರಗಳಲ್ಲಿ, ಮೂರನೇ ಹಂತದಲ್ಲಿ ನಮ್ಮ ಜಿಲ್ಲೆಗಳನ್ನು ಸೇರಿಸಲಾಗಿದೆ. ವಿವಿಧ ಕಾರಣಗಳಿಂದ ಸೆಟ್ ಟಾಪ್ ಬಾಕ್ಸ್ ಗಳ ಅಳವಡಿಕೆ ಕಡ್ಡಾಯ ಎಂದು ಕೇಬಲ್ ಟಿವಿ ಆಪರೇಟರ್ ಗಳಿಗೆ ಸೂಚಿಸಿದ ಅಪರ ಜಿಲ್ಲಾಧಿಕಾರಿಗಳು, ಗ್ರಾಹಕರು ತಮ್ಮ ಮನೆಯ ಟಿವಿಗಳಿಗೆ ಸೆಟ್‌ಟಾಪ್ ಅಳವಡಿಸಿಕೊಳ್ಳಬೇಕಾಗುತ್ತದೆ ಎಂದರು.

ಉಡುಪಿಯ ಕೇಬಲ್ ಟಿವಿ ಆಪರೇಟರ್‌ಗಳ ಪ್ರಕಾರ ಉಡುಪಿ ಮತ್ತು ಕುಂದಾಪುರದ ಕೇಬಲ್ ಸಂಪರ್ಕ ಹೊಂದಿರುವ 1,75,000 ಮನೆಗಳಲ್ಲಿ ಈಗಾಗಲೇ 60,000 ಸೆಟ್‌ಟಾಪ್ ಬಾಕ್ಸ್ ಗಳನ್ನು ಅಳವಡಿಸಲಾಗಿದೆ.
ಕಾರ್ಕಳದಲ್ಲಿ ಕೇಬಲ್ ಸಂಪರ್ಕ ಹೊಂದಿರುವ 4,000 ಮನೆಗಳಲ್ಲಿ ಈಗಾಗಲೇ 800 ಮನೆಗಳಲ್ಲಿ ಸೆಟ್ ಟಾಪ್ ಬಾಕ್ಸ್ ಗಳನ್ನು ಅಳವಡಿಸಲಾಗಿದೆ ಎಂಬ ಮಾಹಿತಿಯನ್ನು ಅಪರ ಜಿಲ್ಲಾಧಿಕಾರಿಗಳಿಗೆ ನೀಡಿದರು.
ಮುಂದಿನ ದಿನಗಳಲ್ಲಿ ಆದಷ್ಟು ಶೀಘ್ರವಾಗಿ ಶೇಕಡ ನೂರು ಸಾಧನೆ ನಗರಗಳಲ್ಲಿ ಆಗಬೇಕೆಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು. ಉಡುಪಿಯ ಗ್ರಾಮಾಂತರ ಪ್ರದೇಶಗಳಲ್ಲಿ ಕೇಬಲ್ ಟಿವಿ ನೆಟ್‌ವರ್ಕ್‌ಗೆ ಈ ವ್ಯವಸ್ಥೆಯಿಂದ ತೊಂದರೆಯಾಗಲಿದೆ ಹಾಗೂ ಸೆಟ್‌ಟಾಪ್ ಬಾಕ್ಸ್ ಕೊರತೆಯ ಬಗ್ಗೆಯೂ ಜಿಲ್ಲಾಡಳಿತದ ಗಮನಕ್ಕೆ ಕೇಬಲ್ ಟಿವಿ ಆಪರೇಟರ್‌ಗಳು ಗಮನಕ್ಕೆ ತಂದರು.

Write A Comment