ಮನೋರಂಜನೆ

ಟಾಟಾ ಸ್ಕೈಗೆ ಮಾಧುರಿ ಲುಕ್

Pinterest LinkedIn Tumblr

madhuridixith

ಮುಂಬೈ: ಆಸಕ್ತಿಯುಳ್ಳ ತನ್ನ ಗ್ರಾಹಕರಿಗಾಗಿ ಆರಂಭಿಸುತ್ತಿರುವ `ಡ್ಯಾನ್ಸ್ ಸ್ಟುಡಿಯೊ’ ಚಾಲನೆಗೆ ಟಾಟಾ ಸ್ಕೈ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ರೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ಡ್ಯಾನ್ಸ್ ಸ್ಟುಡಿಯೋನಲ್ಲಿ ನಾನಾ ರೀತಿಯ ನೃತ್ಯ ಪ್ರದರ್ಶನಗಳನ್ನು ಪ್ರಸ್ತುತಪಡಿಸಲಾಗುವುದು. ಬಾಲಿವುಡ್ ನೃತ್ಯದಿಂದ ಆರಂಭಿಸಿ ಕತಕ್, ಭರತನಾಟ್ಯ, ಜಜ್, ಸಾಲ್ಸ, ಹಿಪ್-ಹಾಪ್, ಟ್ಯಾಂಗೊ ಸೇರಿದಂತೆ ಹಲವು ನೃತ್ಯ ಪ್ರಕಾರಗಳು ಪ್ರಸಾರವಾಗಲಿದೆ.

ಈ ಸಂವಾದ ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಲಭ್ಯವಾಗಲಿದೆ. ಮಾಧುರಿ ದೀಕ್ಷಿತ್ ಮಾತ್ರವಲ್ಲದೆ ಪಂಡಿತ್ ಬಿರ್ಜು ಮಹಾರಾಜ್, ಸರೋಜ್ ಖಾನ್, ರೆಮೊ ಡಿಸೋಜ, ಟೆರೆನ್ಸ್ ಲೂಯಿಸ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

Write A Comment