ರಾಷ್ಟ್ರೀಯ

ಮದುವೆ ಮೆರವಣಿಗೆ ಮೇಲೆ ನುಗ್ಗಿದ ಬಸ್ : ಕಾಂಗ್ರೆಸ್ ನಾಯಕ ಸೇರಿ 6 ಮಂದಿ ಸಾವು

Pinterest LinkedIn Tumblr

accidentಷಹಜಹಾನ್‌ಪುರ, ಡಿ.13- ಗಂಗಸಾರಾ ಪ್ರದೇಶದಲ್ಲಿ ಮದುವೆ ಮೆರವಣಿಗೆ ನಡೆಯುತ್ತಿದ್ದ ವೇಳೆ ಬಸ್ ಒಂದು ಮೆರವಣಿಗೆ ಮೇಲೆ ನುಗ್ಗಿ ಕಾಂಗ್ರೆಸ್ ನಾಯಕ ಸೇರಿದಂತೆ 6 ಜನ ಮೃತಪಟ್ಟಿದ್ದು, ಇತರ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಉತ್ತರಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರುಣ್ ವಾಜಪೇಯಿ (40) ಮತ್ತು 28 ವರ್ಷದ ಮೋನು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದರು. ಗಾಯಗೊಂಡಿದ್ದವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು.

ಸತ್ಯಪ್ರಕಾಶ್, ಶ್ರೀವಾಸ್ತವ್, ಕೌಶಲ್‌ಕುಮಾರ್ ಮತ್ತು ರಮೇಶ್ ಮಿಶ್ರೇ ಮಾರ್ಗದಲ್ಲೇ ಕೊನೆಯುಸಿರೆಳೆದರು.  ಇನ್ನುಳಿದ 6 ಜನ ಗಾಯಾಳುಗಳನ್ನು ಚಿಕಿತ್ಸೆಗಾಗಿ ಲಕ್ನೋಗೆ ಕಳುಹಿಸಿಕೊಡಲಾಗಿದೆ. ಬಸ್ ಚಾಲಕ ಪರಾರಿಯಾಗಿದ್ದು, ಕ್ಲೀನರ್‌ನನ್ನು ಬಂಧಿಸಲಾಗಿದೆ. ಬಸ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment